ಶಾರುಕ್ ಖಾನ್, ಹನೂರು ಹನೂರು : ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನ ಕಾಲು ಮುರಿದಿರುವ ಘಟನೆ ಮಾರ್ಟಳ್ಳಿ ಗ್ರಾಮದ ಸಮೀಪ ಶನಿವಾರ ರಾತ್ರಿ 7.30ಕ್ಕೆ ನಡೆದಿದೆ. ತಾಲ್ಲೂಕಿನ ಸಂದನಪಾಳ್ಯ ಗ್ರಾಮದ ಸೆಲ್ವಾ (30) ಗಾಯಗೊಂಡವನಾಗಿದ್ದು, ಈತನ ಸ್ಥಿತಿ ಗಂಭಿರವಾಗಿದೆ. ವಿಷಯ ತಿಳಿದ ಪೊಲೀಸರು ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ಕಳಿಸಿದರು. ಸೆಲ್ವಾ ಕೂಲಿ ಕಾರ್ಮಿಕನಾಗಿದ್ದು, ಕೆಲಸ ಮುಗಿಸಿ ಮಾರ್ಟಳ್ಳಿ ಗ್ರಾಮದಿಂದ ತನ್ನ ಬೈಕ್‍ನಲ್ಲಿ ಸಂದನಪಾಳ್ಯಕ್ಕೆ ತೆರಳುವ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
0 ಕಾಮೆಂಟ್‌ಗಳು