ಬಸ್ ಡಿಕ್ಕಿ : ಬೈಕ್ ಸವಾರ ಸಾವು

ಶಾರುಕ್ ಖಾನ್, ಹನೂರು

ಹನೂರು : ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನ ಕಾಲು ಮುರಿದಿರುವ ಘಟನೆ ಮಾರ್ಟಳ್ಳಿ ಗ್ರಾಮದ ಸಮೀಪ ಶನಿವಾರ ರಾತ್ರಿ 7.30ಕ್ಕೆ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.   
ತಾಲ್ಲೂಕಿನ ಸಂದನಪಾಳ್ಯ ಗ್ರಾಮದ ಸೆಲ್ವಾ (30) ಮೃತ ವ್ಯಕ್ತಿ.
ಅಪಘಾತ ನಡೆದ ವೇಳೆ ಈತನ ಕಾಲು ಮುರಿದು ತೀವ್ರವಾಗಿ ರಕ್ತಸ್ರಾವವಾಗಿತ್ತು. ಜತೆಗೆ ದೇಹದ ಇನ್ನಿತರ ಭಾಗದಲ್ಲೂ ಪೆಟ್ಟಾಗಿತ್ತು. ತಕ್ಷಣ ಪೊಲೀಸರು ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ಕಳಿಸಿದರಾದರೂ ಮಾರ್ಗ ಮಧ್ಯೆ ಈತ ಮೃತಪಟ್ಟನು ಎನ್ನಲಾಗಿದೆ.
ಮೃತ ಸೆಲ್ವಾ ಕೂಲಿ ಕಾರ್ಮಿಕನಾಗಿದ್ದು, ಕೆಲಸ ಮುಗಿಸಿ ಮಾರ್ಟಳ್ಳಿ ಗ್ರಾಮದಿಂದ ತನ್ನ ಬೈಕ್‍ನಲ್ಲಿ ಸಂದನಪಾಳ್ಯಕ್ಕೆ ತೆರಳುವ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು