ಮತದಾರರು ಬದಲಾವಣೆ ಬಯಸಿದ್ದಾರೆ
ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಖಾತೆ ತೆರೆಯಬಹುದು ಎಂದು
ಮಹಾಶಕ್ತಿ ಕೇಂದ್ರದ ಉಸ್ತುವಾರಿ ಜಗದೀಶ್ ಗೌಡ ಹೇಳಿದರು.
ಚಾಮುಂಡೇಶ್ವರಿ ಗ್ರಾಮಾಂತರ ಪ್ರದೇಶ ವಿಜಯನಗರ 4ನೇ ಹಂತದ ಬೂತ್ ನಂ,116ರಲ್ಲಿ ಬೂತ್ ವಿಜಯ್ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಕೆಲವೇ ಕೆಲವು ಮುಖಂಡರ ಅಭಿವೃದ್ಧಿ ಆಗಿದೆಯೇ ಹೊರತು ಕ್ಷೇತ್ರದ ಮತದಾರರಿಗೆ ಅನುಕೂಲವಾಗುವ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ ಮುಂತಾದ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಮತದಾರರು ಬದಲಾವಣೆ ಬಯಸಿದ್ದು ಈ ಬಾರಿ ಇಲ್ಲಿ ಕಮಲ ಅರಳಲು ಕಾಲ ಪಕ್ವವಾಗಿದೆ ಎಂದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ್ ರಾವ್, ಪ್ರಮುಖ್ ಹಿನ್‍ಕಲ್ ಶಿವು, ಅಭಿಯಾನದ ಸಹ ಪ್ರಮುಖ್ ಹಿನ್‍ಕಲ್ ಶ್ರೀನಿವಾಸ್ಬೂತ್ ಅಧ್ಯಕ್ಷೆ ಗೀತಾ ವೇಲುಮಣಿ, ಕಾರ್ಯದರ್ಶಿ ಮಣಿ, ಬಿಎಲ್‍ಎ-2 ಮೀನಾ, ಬೂತ್ ಏಜೆಂಟ್ ಕೇತನ್ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು