ಟಿ.ನರಸೀಪುರದಲ್ಲಿ ಹೆದ್ದಾರಿ ತಡೆದು ಹೊರಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ : ಜಯಂತ್ ಸಾವು ಕೊನೆಯಾಗಲಿ, ಚಿರತೆಗಳ ಸೆರೆಗೆ ಸರ್ಕಾರ ಮುಂದಾಗಲಿ ಎಂದು ಹೋರಾಟ

ನಾಗೇಂದ್ರ ಕುಮಾರ್, ಟಿ.ನರಸೀಪುರ
ಟಿ.ನರಸೀಪುರ : ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ನಾಲ್ಕು ಜನರು ಬಲಿಯಾಗಿದ್ದು, ತಾಲ್ಲೂಕಿನ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಗುರುವಾರ ರಾತ್ರಿ ವೃದ್ಧೆಯೊಬ್ಬರು ಬಲಿಯಾದರೆ, ಶನಿವಾರ ರಾತ್ರಿ ಬಾಲಕ ಬಲಿಯಾಗಿರುವುದು ಖಂಡಿಸಿ ಹೊರಳಹಳ್ಳಿ ಗ್ರಾಮಸ್ಥರು ನರಸೀಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕೋಯಿಕೋಡ್-ಕೊಳ್ಳೆಗಾಲ ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಇನ್ನೆಷ್ಟು ಅಮಾಯಕರ ಬಲಿ ಪಡೆಯುತ್ತೀರಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಮಾಯಕ ಬಾಲಕ ಜಯಂತ್ ಸಾವು ಕೊನೆಯಾಗಬೇಕು. ಇನ್ನುಮುಂದೆ ಚಿರತೆ ದಾಳಿಗೆ ಯಾರೂ ಸಾಯಬಾರದು. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಮತ್ತು ಜನ ಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಲಾಯಿತು. ಮೃತ ಬಾಲಕನ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು
.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು