ಚಾಮರಾಜನಗರದಲ್ಲಿ ಟೈಲರ್ ಅಂಗಡಿಗೆ ಆಕಸ್ಮಿಕ ಬೆಂಕಿ: ಬಟ್ಟೆ, ಟೈಲರಿಂಗ್‌ ಯಂತ್ರಗಳು ಭಸ್ಮ

ಚಾಮರಾಜನಗರ: ವಿದ್ಯುತ್‌ ಅವಘಡದಿಂದ ಟೈಲರ್ ಅಂಗಡಿಯೊಂದು ಸುಟ್ಟು ಭಸ್ಮವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ಸಂತೇಮರಳ್ಳಿ ವೃತ್ತದ ಬಳಿಯ ಜಾಮಿಯಾ ಮಸೀದಿ ಬಳಿ ಗುರುವಾರ ಬೆಳಗಿನ ಝಾವ ನಡೆದಿದೆ.
ಸೈಯದ್ ಜಾವೀದ್ ಎಂಬವರ ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು, ಟೈಲರಿಂಗ್‌ ಮಷಿನ್ ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿದ್ದು, ಸಾರ್ವಜನಿಕರು ಹೊಲಿಸಲು ಕೊಟ್ಟಿದ್ದ ಹೊಸ ಬಟ್ಟೆಗಳು ಮತ್ತು ಮೆಷಿನ್‌ಗಳು ಸುಟ್ಟುಹೋದ ಕಾರಣ ನಮಗೆ ಅಗತ್ಯ ಸಹಾಯ ಮಾಡುವಂತೆ ಅಂಗಡಿಯ ಮಾಲೀಕ ಜಾವೀದ್‌ ಮನವಿ ಮಾಡಿದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು