ಕೆ.ಎಂ.ದೊಡ್ಡಿಯಲ್ಲಿ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ

ಟಿ.ಬಿ.ಸಂತೋಷ, ಮದ್ದೂರು
ಮದ್ದೂರು: ತಾಲೊಕಿನ ಕೆ.ಎಂ.ದೊಡ್ಡಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ "ಭೀಮಾ ಕೊರೆಗಾಂವ್ ಸ್ಮಾರಕದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ವಿಜಯೋತ್ಸವ " ಆಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. 
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಸಿಪಾಯಿ ದಂಗೆಗಿಂತ 40ವರ್ಷ ಮೊದಲು ನಡೆದ ಮಹಾಯುದ್ಧ 01-01-1818 ರಲ್ಲಿ ಅಸ್ಪೃಶ್ಯತೆಯನ್ನು ತಾಳಲಾರದೆ 500 ಜನ ಮಹರ್ ಸೈನಿಕರು 28000 ಪೇಶ್ವೆ ಎರಡನೇ ಬಾಜಿರಾಯನ ಸೈನ್ಯವನ್ನು ಸೋಲಿಸಿದಂತಹ ಐತಿಹಾಸಿಕ ಭೀಮಾ ಕೋರೆಗಾವ್ ಯುದ್ಧವನ್ನು ಮನುವಾದಿಗಳು ಇತಿಹಾಸದಿಂದ ಮುಚ್ಚಿಟ್ಟಿದ್ದರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬ್ರಿಟನ್ ಗ್ರಂಥಾಲಯದಲ್ಲಿ ಈ ಯುದ್ಧದ ಕುರಿತು ಮಾಹಿತಿ ಸಿಕ್ಕಿದ್ದು, ಇದನ್ನು ಸಂಶೋಧನೆ ಮಾಡಿ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಭಾರತ ದೇಶದಲ್ಲಿ ಹೆಣ್ಣಿಗಾಗಿ, ಮಣ್ಣಿಗಾಗಿ ಮತ್ತು ಪ್ರತಿμÉ್ಠಗಾಗಿ ಅದೆμÉೂ್ಟೀ ಕದನಗಳು ನಡೆದಿವೆ. ಆದರೆ ಸಮಾನತೆಯ ಸ್ವಾತಂತ್ರ್ಯಕ್ಕಾಗಿ ನಡೆದ ಮೊಟ್ಟ ಮೊದಲ ಯುದ್ಧವೇ ಭೀಮಾ ಕೊರೆಗಾಂವ್ ಯುದ್ಧ. 500 ಜನ ನಮ್ಮ  ಸ್ವಾಭಿಮಾನಿ ಮಹರ್ ಸೈನಿಕರು 28000 ಪೇಶ್ವೆಗಳನ್ನು ಸೋಲಿಸಿ ಸ್ವಾಭಿಮಾನದ ವಿಜಯ ಸಾಧಿಸಿದ ದಿನ ಎಂದರು.
ಗ್ರಾಪಂ ಸದಸ್ಯ ಈ.ರುದ್ರಯ್ಯ, ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕರಡಕೆರೆ ಯೋಗೇಶ್, ಚಿಕ್ಕರಸಿನಕೆರೆ ಮೂರ್ತಿ, ಕಾಡು ಕೋತ್ತನಹಳ್ಳಿ ಚಿದಂಬರಂ ಮೂರ್ತಿ, ಮರಿಸ್ವಾಮಿ, ಟಿಬಿ ಹಳ್ಳಿ 
ಸಂತೋಷ , ಬೊಪ್ಪಸಮುದ್ರ ಅಜಯ್, ಹುಲಿಗೆರೆಪುರ  ಮಹದೇವು, ಹೆಮ್ಮನಹಳ್ಳಿ ಕೃಷ್ಣ, ಕನ್ನಲಿ ಮೋಹನ್ ಮುಂತಾದವರು ಇದ್ದರು.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು