ಬಾಲಕಿ ಮೇಲೆ ಅತ್ಯಾಚಾರ ಪೋಕ್ಸೋ ಪ್ರಕರಣ ದಾಖಲು

ಯಳಂದೂರು : ತಾಲೂಕಿನ ಕೋಳಿಫಾರ್ಮ್‍ವೊಂದರಲ್ಲಿ ಕುಟುಂಬದ ಜತೆಗೆ ವಾಸವಿದ 16 ವರ್ಷದ ಬಾಲಕಿ ಮೇಲೆ 3 ತಿಂಗಳ ಹಿಂದೆ ಅತ್ಯಾಚಾರ ಎಸಗಿಲಾಗಿದ್ದು, ಆಕೆ ಈಗ ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಬಿಹಾರ ಮೂಲದ ಕೂಲಿ ಕಾರ್ಮಿಕರು ತಿಂಗಳ ಹಿಂದೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಕೋಳಿಫಾರ್ಮ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಲ್ಲಿನ ದಂಪತಿಗೆ ಐದು ಮಕ್ಕಳಿದ್ದು, ಈ ಬಾಲಕಿಯೇ ದೊಡ್ಡವಳು ಎಂದು ತಿಳಿದು ಬಂದಿದೆ.
ಈಕೆಗೆ ತೀವ್ರವಾದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರ ತಂದೆ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ಸಮಯದಲ್ಲಿ ಈ ಬಾಲಕಿ 3 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ನಂತರ ಬಾಲಕಿಯನ್ನು ಚಾಮರಾಜನಗರ ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಮಾಹಿತಿ ನೀಡಿ ಕುಟುಂಬದ ಜತೆಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು