ಸಭೆಗೆ ಅಧಿಕಾರಿಗಳು ಬರಲಿಲ್ಲ ಅಂದ್ರೇ ಮನೆಗೆ ಹೋಗಿ ಕರೆಯಕ್ಕಾಗುತ್ತಾ?
ಡಿಸೆಂಬರ್ 23, 2022
ಟಿ.ನರಸೀಪುರ: ತಾಲ್ಲೂಕು ಕೇಂದ್ರ ಅಥವಾ ಗ್ರಾಮಗಳಲ್ಲಿ ನಡೆಯುವ ಯಾವುದೇ ಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾಗುವುದು ಸಾಮಾನ್ಯವಾಗಿದ್ದು, ಸಭೆಗೆ ಬರಲಿಲ್ಲ ಅಂದ್ರೆ ನಾನು ಅವರ ಮನೆಗೆ ಹೋಗಿ ಕರೆಯಕ್ಕಾಗುತ್ತಾ? ಎಂದು ತಹಶಿಲ್ದಾರ್ ಗೀತಾ ಹೇಳಿದರು. ಮೂಗೂರು ಜಾತ್ರಾ ಮಹೋತ್ಸವ ಸಿದ್ದತೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಬಂದಿರಲಿಲ್ಲ. ಇದನ್ನು ಸ್ಥಳೀಯ ಮುಖಂಡರು ಪ್ರಶ್ನಿಸಿದಾಗ ತಹಶೀಲ್ದಾರ್ ಗೀತಾ ಮೇಲಿನಂತೆ ಉತ್ತರಿಸಿದರು. ತಾಲೂಕು ಆಡಳಿತ ಭವನದಲ್ಲಿ ಮತ್ತೊಮ್ಮೆ ಸಭೆ ಕರೆದು ಅಯಾಯ ಇಲಾಖೆಯವರ ಜವಾಬ್ದಾರಿ ತಿಳಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುತ್ತೇವೆ. ಭಕ್ತರಿಗೆ ಅಗತ್ಯ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದರು. ಎಂ.ಸಿದ್ಧರಾಜು, ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಉಪ ತಹಶೀಲ್ದಾರ್ ಲಕ್ಷ್ಮೀ, ಆರ್‍ಐ ಬಸವರಾಜು, ಪಿಎಸ್‍ಐ ತಿರುಮಲೇಶ್, ಎಂ.ಪಿ. ನಾಗರಾಜು, ಎಂ.ಬಿ. ಸಾಗರ್, ಕಿರಣ್, ಎಂ.ಎಂ.ಜಯಣ್ಣ, ಎಂ.ಕೆ.ಸಿದ್ಧರಾಜು, ಎಂ.ಆರ್.ಸುಂದರ್, ಪಿಡಿಒ ಪೂರ್ಣಿಮಾ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಮಹೇಂದ್ರ ಕುಮಾರ್, ಶೇಖರ್, ದೇವಾನಂದ್ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು