ಬೆಳ್ಳಂ ಬೆಳಗ್ಗೆ ರೌಡಿಗಳ ಮನೆ ಮೇಲೆ ಪೊಲೀಸ್ ದಾಳಿ, ಮಾರಕಾಸ್ತ್ರಗಳ ವಶ ಬಾಲ ಬಿಚ್ಚಿದರೆ ಜೋಕೆ ಎಂದು ಎಚ್ಚರಿಕೆ ನೀಡಿದ ಖಾಕಿ

ಮೈಸೂರು: ಇಂದು ಬೆಳ್ಳಂ ಬೆಳಗ್ಗೆ ಪೊಲೀಸರು ನಗರದ ರೌಡಿಗಳ ಮನೆಗಳ ದಾಳಿ ಮಾಡಿ ಮಾರಕಾಸ್ತ್ರಗಳ ಪರಿಶೀಲನೆ ನಡೆಸಿ ರೌಡಿಸಂ ನಲ್ಲಿ ಸಕ್ರಿಯವಾಗಿರುವ ಪುಂಡರನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದ್ದಾರೆ. 
ಮಂಗಳವಾರ ಬೆಳಗ್ಗೆ ಮೂರುವರೆ ಗಂಟೆಗೆ ನಿದ್ರೆಯ ಮಂಪರಿನಲ್ಲಿದ್ದ ರೌಡಿಗಳು ತಮ್ಮ ಮನೆಯ ಕದ ತಟ್ಟಿದ ಪೊಲೀಸರನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ರೌಡಿಗಳ ಮನೆಗಳಲ್ಲಿ ಪೊಲೀಸರು ಮಾರಕಾಸ್ತ್ರಗಳ ಪರಿಶೀಲನೆ ನಡೆಸಿ, ರೌಡಿಸಂನಲ್ಲಿ ಸಕ್ರಿಯವಾಗಿರುವ ಎಲ್ಲ ಹಿರಿಯ, ಕಿರಿಯ ಪುಂಡರನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ಪರೇಡ್ ನಡೆಸಿದರು. 
ʻಬಾಲ ಬಿಚ್ಚಿದರೆ ಹುμÁರ್ʼ ಎಂದು ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು, ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಖಡಕ್ಕಾಗಿ ಎಚ್ಚರಿಸಿದರು. ಜತೆಗೆ ರೌಡಿಗಳ ಕುಟುಂಬದವರಿಗೂ ತಿಳಿವಳಿಕೆ ನೀಡಿ, ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ರಿಯಲ್ ಎಸ್ಟೇಟ್ ದಂಧೆ, ಗಲಾಟೆ, ಹೊಡೆದಾಟ, ಯಾವುದೇ ಅವ್ಯವಹಾರಗಳು ನಡೆಸಿದರೆ ನಮಗೆ ತಕ್ಷಣ ಮಾಹಿತಿ ನೀಡಿ ಎಂದು ಸಲಹೆಯನ್ನೂ ನೀಡಿದರು.ಈ ಸಂದರ್ಭದಲ್ಲಿ ಡಿಸಿಪಿ ಪ್ರದೀಪ್ ಗುಂಟಿ, ಹಿರಿಯ ಪೊಲೀಸ್ ಅಧಿಕಾರಿಗಳಾದ ಶಿವಶಂಕರ್, ಗಂಗಾಧರಸ್ವಾಮಿ, ಶಶಿಧರ್, ಅಶ್ವತ್ಥನಾರಾಯಣ ಮುಂತಾದವರು ಇದ್ದರು.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೇತೃತ್ವದಲ್ಲಿ ನಗರದ 18 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ರೌಡಿಗಳ ಮನೆಗಳಲ್ಲಿ ತಪಾಸಣೆ ನಡೆದು ಹಲವು ರೌಡಿಗಳ ಮನೆಯಲ್ಲಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಾಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು