ಮಾದಪ್ಪನ ಹುಂಡಿಯಲ್ಲಿ 2.59 ಕೋಟಿ ನಗದು, 80 ಗ್ರಾಂ ಚಿನ್ನ, 3,900 ಕೆ.ಜಿ. ಬೆಳ್ಳಿ ಸಂಗ್ರಹ

ಸಂಗ್ರಹ ಚಿತ್ರ
-ಶಾರುಕ್ ಖಾನ್, ಹನೂರು
ಹನೂರು : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಬಿದ್ದ ಹಣ, ಚಿನ್ನ, ಬೆಳ್ಳಿ ಮುಂತಾದವುಗಳ ಎಣಿಕೆ ನಡೆದಿದ್ದು, ಈ ಬಾರಿ 34 ದಿನದಲ್ಲಿ ಬರೋಬ್ಬರಿ ರೂ.2.59,31,472 ನಗದು, 80 ಗ್ರಾಂ ಚಿನ್ನ, 3.900 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ.
ಡಿಸೆಂಬರ್ 7 ರಂದು ಎಣಿಕೆ ಕಾರ್ಯ ನಡೆಯಿತು. ನವೆಂಬರ್ 3 ರಿಂದ ಡಿಸೆಂಬರ್ 6 ರ ತನಕ 34 ದಿನಗಳಲ್ಲಿ ಈ ಹಣ ಮತ್ತು ಚಿನ್ನಾಭರಣಗಳು ಹುಂಡಿಗಳಲ್ಲಿ ಸಂಗ್ರಹವಾಗಿದೆ ಎಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಎಂ.ಬಸವರಾಜು ತಿಳಿಸಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು