ಅಂಬೇಡ್ಕರ್ ಆಶಯ ಈಡೇರಿದರೆ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ : ಬೋಧಿರತ್ನ ಭಂತೇಜಿ

 ಟಿ.ನರಸೀಪುರ: ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ಅವರ ಆಶಯಗಳು ನೆರವೇರಿದ್ದಲ್ಲಿ ಈ ದೇಶ ಪ್ರಬುದ್ಧ ಭಾರತವಾಗಿ ಹೊರ ಹೊಮ್ಮುತ್ತದೆ ಎಂದು ತ್ರಿವೇಣಿ ನಗರ ಬುದ್ಧ ವಿಹಾರದ ಬೋಧಿರತ್ನ ಭಂತೇಜಿಯವರು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣದ ಪ್ರಯುಕ್ತ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಎಲ್ಲಾ ಆಡಳಿತರೂಢ ಅಧಿಕಾರ ಶಾಹಿಗಳು ಬಾಬಾ ಸಾಹೇಬರ ಚಿಂತನೆಗಳನ್ನು ಮರೆತು ತಮ್ಮದೇ ಆದ ಆಲೋಚನೆಯಲ್ಲಿ ದೇಶವನ್ನು ಆಳುತ್ತಿರುವುದರಿಂದ ಅಸಮಾನತೆ ಹಾಗೂ ದೇಶದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಇನ್ನಾದರು ಬಾಬಾ ಸಾಹೇಬರ ಪರಿನಿಬ್ಬಾಣ ದಿನದಂದು ರಾಜಕಾರಣಿಗಳು, ಸಮಾಜ ಚಿಂತಕರು, ಸರ್ವ ಸಮಾಜದ ನಾಯಕರು ಸಂಕಲ್ಪ ಮಾಡಿ ಈ ದೇಶವನ್ನು ಉನ್ನತಿಯ ಕಡೆಗೆ ಸಾಗಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು