ಪಾಂಡವಪುರ : ಜಯಂತಿನಗರ ಗ್ರಾಮದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಚಿರತೆ ಪ್ರತ್ಯಕ್ಷ : ನಾಯಿ ನಾಪತ್ತೆ
ಡಿಸೆಂಬರ್ 09, 2022
ಪಾಂಡವಪುರ : ತಾಲ್ಲೂಕಿನ ಜಯಂತಿನಗರದ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಝಾವ 3 ಗಂಟೆ ವೇಳೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಬೆಳಗಿನ ಝಾವ 3 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋಗಲು ಮನೆಯಿಂದ ಹೊರಬಂದಾಗ ತಮ್ಮ ಮನೆಯ ಮುಂದೆಯೇ ಚಿರತೆ ಬರುತ್ತಿರುವುದ ಕಂಡು ಹೌಹಾರಿ ಮನೆಯ ಬಾಗಿಲು ಹಾಕಿಕೊಂಡು ಪಕ್ಕದ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದರು ಎನ್ನಲಾಗಿದ್ದು, ಬೆಳಕು ಹರಿಯುವ ತನಕ ನಿದ್ರೆ ಮಾಡದೆ ಕಿಟಕಿಯಲ್ಲಿ ಚಿರತೆ ಚಲನವಲನ ಗಮನಿಸಿದ್ದಾರೆ. ಅಲ್ಲದೇ ಮನೆಯ ಮುಂದಿದ್ದ ಸಾಕು ನಾಯಿಯೂ ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯ್ದಿರಬಹುದು ಎನ್ನಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಬೆಳಕು ಹರಿದ ನಂತರ ಗ್ರಾಮಸ್ಥರು ಚಿರತೆಯ ಹೆಜ್ಜೆ ಗುರುತುಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಪತ್ರಿಕೆಗೆ ಕಳಿಸಿದ್ದಾರೆ.
0 ಕಾಮೆಂಟ್‌ಗಳು