ಬೈಕ್ ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದಾರುಣ ಸಾವು

ಗುಂಡ್ಲುಪೇಟೆ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ಸೆಂಟ್ ಜಾನ್ಸ್ ಶಾಲೆಯ ಬಳಿ ನಡೆದಿದೆ.
ಜಕ್ಕಹಳ್ಳಿ ಗ್ರಾಮದ ಚಂದ್ರು(32), ಲಕ್ಕೂರು ಗ್ರಾಮದ ಅನಿಲ್(26) ಮೃತ ವ್ಯಕ್ತಿಗಳಾಗಿದ್ದು, ಬೈಕ್‍ನಲ್ಲಿ ಕುಳಿತಿದ್ದ ಮತ್ತೋರ್ವನಿಗೆ ತೀವ್ರ ತರವಾದ ಗಾಯಗಳಾದ ಹಿನ್ನೆಲೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. 

ಎರಡು ಬೈಕ್ ಸವಾರರು ಅಜಾಗರೂಕತೆಯಿಂದ ಅತೀ ವೇಗದಿಂದ ಬಂದ ಪರಿಣಾಮ ಮುಖಾಮುಖೀ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.

ಘಟನೆ ನಂತರ ಗುಂಡ್ಲುಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಬೈಕ್‍ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಲಿಸಿಕೊಂಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು