ಕಾಡಾನೆ ದಾಳಿ : ವ್ಯಕ್ತಿಯ ಸ್ಥಿತಿ ಗಂಭೀರ

ಶಾರುಕ್ ಖಾನ್, ಹನೂರು
ಹನೂರು : ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬನ ಕೈ ಕಾಲು ಮರಿದಿರುವ ಘಟನೆ ತಾಲ್ಲೂಕಿನ ಹುತ್ತೂರು ಸಮೀಪದ ಕತ್ತೆಕಾಲು ಪೋಡಿ ಗ್ರಾಮದಲ್ಲಿ ನೆಡೆದಿದೆ.
ಗ್ರಾಮದ ಮಾದೇಶ್(45) ಆನೆದಾಳಿಯಿಂದ ಗಾಯಗೊಂಡ ವ್ಯಕ್ತಿಯಾಗಿದ್ದು, ಈತನ ಸ್ಥಿತಿ ಗಂಭೀರವಾಗಿದೆ. 
ಮಾದೇಶ ಬೈಲೂರು ಅರಣ್ಯ ಪ್ರದೇಶ ಸಮೀಪದ ಜಮೀನಿನಲ್ಲಿ ವಾಸವಿದ್ದರು. ಇವರಿಗೆ ಸ್ವಲ್ಪ ಕಣ್ಣು ಕುರುಡು ಇತ್ತು ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಇವರ ಜಮೀನಿಗೆ ನುಗ್ಗಿದ ಕಾಡೆಆನೆ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಆ ಮಾರ್ಗವಾಗಿ ಬಂದ ದನಗಾಹಿಗಳು ಮಾದೇಶ ನರಳುತ್ತಿದ್ದನ್ನು ಕಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು ಎನ್ನಲಾಗಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ಬಂದ ತಕ್ಷಣ ತಮ್ಮ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು