ಅವಧಿ ಮೀರಿದ ಪರೀಕ್ಷಾ ಕಿಟ್ ಬಳಕೆ : ರೈತರ ಆಕ್ಷೇಪ


ಬೆಂಗಳೂರು : ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ನಿರತ ರೈತರು ಅಸ್ವಸ್ಥಗೊಂಡಾಗ ಸ್ಥಳಕ್ಕೆ ಬಂದ ಅಂಬುಲೆನ್ಸ್‍ನಲ್ಲಿ ಅವಧಿ ಮೀರಿದ ಪರೀಕ್ಷಾ ಕಿಟ್ ಬಳಕೆ ಬೆಳಕಿಗೆ ಬಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಸೋಮವಾರ ಸಂಜೆ ಉಪವಾಸ ನಿರತ ರೈತರು ಸುಸ್ತಾಗಿದೆ ಎಂದಾಗ ಪೊಲೀಸರು ಆಂಬುಲೆನ್ಸ್ ಕರೆಸಿದರು. ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶುಶ್ರೂಶಕರು ಅಸ್ವಸ್ಥ ರೈತರ ರಕ್ತ ಪರೀಕ್ಷೆ ಮಾಡಲು ಬಳಸಿದ ಪರೀಕ್ಷಾ ಕಿಟ್ ಅವಧಿ ಮೀರಿತ್ತು. ಈ ಬಗ್ಗೆ ರೈತರು ಪ್ರಶ್ನೆ ಮಾಡಿದಾಗ ಮತ್ತೆ ಹೊಸ ಕಿಟ್ ತಂದು ಪರೀಕ್ಷೆ ಮಾಡಲು ಯತ್ನಿಸಿದರು. ಆಗಲು ಕೆಲವು ಲೋಪದೋಷಗಳು ಕಂಡು ಬಂದಾಗ ರೈತರು ಒಪ್ಪದೆ ವಾಪಸ್ ಕಳಿಸಿ, ಆರೋಗ್ಯ ಇಲಾಖೆ ಬೇಜವಾಬ್ದಾರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.