ಹಣಕಾಸು ವ್ಯವಹಾರ : ಮಹಿಳೆಯ ಬರ್ಬರ ಹತ್ಯೆ, ಪರಿಚಿತರಿಂದಲೇ ಕೃತ್ಯ ಶಂಕೆ

ಹಾಸನ : ಹಣಕಾಸು ವ್ಯವಹಾರ ಸಂಬಂಧ ಮಹಿಳೆರಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು ಗಂಗೂರಿನಲ್ಲಿ ನಡೆದಿದೆ.
ಗ್ರಾಮದ ರಾಜೃಗೌಡರ ಪತ್ನಿ ಪಾರ್ವತಮ್ಮ ಕೊಲೆಯಾದ ಮಹಿಳೆ.
ಪಾರ್ವತಮ್ಮ ಬೆಳಗ್ಗೆ 7:30 ಕ್ಕೆ ಡೈರಿಗೆ ಹಾಲು ಹಾಕಿ ವಾಪಸ್ ಬಂದಿದ್ದರು. ಈ ವೇಳೆ ಮನೆಗೆ ಬೈಕ್‍ನಲ್ಲಿ ಮನೆಗೆ ಬಂದಿದ್ದ ಇಬ್ಬರು, ಮನೆಯೊಳಗೆಯೇ ಪಾರ್ವತಮ್ಮಳ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆಗೈದು ಪರಾರಿಯಾಗಿದ್ದಾರೆ. ಹಣಕಾಸಿನ ವಿಷಯದಲ್ಲಿ ಪಾರ್ವತಮ್ಮಳನ್ನು ಪರಿಚಿತರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. 
ಗಂಡ ರಾಜೇಗೌಡ ಬೆಂಗಳೂರಿಗೆ ಮಗನ ಮನೆಗೆ ಹೋಗಿದ್ದ ವೇಳೆ ಮನೆಯಲ್ಲಿ ಪಾರ್ವತಮ್ಮ ಒಬ್ಬರೇ ಇರುವುದನ್ನು ಗಮನಿಸಿ ಕೃತ್ಯ ಎಸಗಲಾಗಿದೆ. ಸ್ಥಿತಿವಂತ ಕುಟುಂಬದವರಾದ ಪಾರ್ವತಮ್ಮ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ಇಂದು ಬೆಳಗ್ಗೆ 9 ಗಂಟೆಗೆ ಪಕ್ಕದ ಮನೆಯ ಸಾಕಮ್ಮ ಎಂಬುವವರು ಪಾರ್ವತಮ್ಮ ಮನೆ ಬಳಿ ಬಂದು ಸಂಘಕ್ಕೆ ಬರೋದಿಕ್ಕೆ ಕರೆದಿದ್ದಾರೆ, ಪಾರ್ವತಮ್ಮ ಮನೆ ಬಾಗಿಲು ತೆರೆದಿತ್ತು. ಆದ್ರೆ ಪಾರ್ವತಮ್ಮ ಮಾತನಾಡಿಲ್ಲ. ಎಷ್ಟು ಕರೆದರೂ ಪ್ರತಿಕ್ರಿಯಿಸಿಲ್ಲ. ಈ ವೇಳೆ ಅಕ್ಕಪಕ್ಕದವರ ಕರೆದು ಮನೆಯೊಳಗೆ ಹೋಗಿ ನೋಡಿದ್ದಾರೆ. ಆಗ ಪಾರ್ವತಮ್ಮ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ನಂತರ ಪಾರ್ವತಮ್ಮ ಪತಿಗೆ ಮತ್ತು ಮಕ್ಕಳಿಗೆ, ಪೊಲೀಸ್ ಠಾಣೆಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದಾರೆ. ಮೃತದೇಹದ ಬಳಿ ಮೂರು ಕಾಫಿ ಲೋಟಗಳಿದ್ದು, ಪರಿಚಿತರಿಗೆ ಪಾರ್ವತಮ್ಮ ಕಾಫಿ ಮಾಡಿ ಕೊಟ್ಟಿದ್ದಾರೆ. ನಂತರ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪರಿಚಿತರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. 
ಹಾಸನ ಎಸ್ಪಿ ಹರಿರಾಂ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು