ಶಾಸಕ ಸಿಎಸ್ ಪುಟ್ಟರಾಜು ನಾಯಕತ್ವ ಮೆಚ್ಚಿ ಸಣಬ ಗ್ರಾಮದ ನೂರಾರು ಯುವಕರು ಜೆಡಿಎಸ್ ಸೇರ್ಪಡೆ

ಪಾಂಡವಪುರ: ಶಾಸಕ ಸಿ.ಎಸ್.ಪುಟ್ಟರಾಜು ನಾಯಕತ್ವ ಹಾಗೂ  ಕಾರ್ಯವೈಖರಿ ಮೆಚ್ಚಿ ತಾಲೂಕಿನ ಸಣಬ ಗ್ರಾಮದ ನೂರಾರು ಹಿರಿಯ ಮುಖಂಡರು ಮತ್ತು ಯುವಕರು ರೈತಸಂಘವನ್ನು ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಚಿನಕುರಳಿ ಗ್ರಾಮದ ಶಾಸಕ ಸಿ.ಎಸ್.ಪುಟ್ಟರಾಜು ನಿವಾಸದಲ್ಲಿ ಸಣಬ ಗ್ರಾಮದ ಜೆಡಿಎಸ್ ಮುಖಂಡರಾದ ಚನ್ನಕೇಶವ, ಎಸ್.ಕೆ.ಪ್ರಕಾಶ್, ಚಲುವರಾಜು ಅವರ ನೇತೃತ್ವದಲ್ಲಿ ರೈತಸಂಘದ ಮುಖಂಡರಾದ ಸಣ್ಣೇಗೌಡ, ಮೂಲೆಮನೆ ಕೃಷ್ಣೇಗೌಡ, ಎಸ್.ಕೆ.ಯೋಗಣ್ಣ, ಕಾಂತರಾಜು, ಸ್ವಾಮಯ್ಯ, ಜವರಯ್ಯ, ಸ್ವಾಮಿ, ಉಮಾಶಂಕರ್, ಯೋಗಯ್ಯ, ನರಸಿಂಹಶೆಟ್ಟಿ, ಶೇಖರಯ್ಯ, ಕಾರೆ ಚಲುವಯ್ಯ, ಮಾದಮ್ಮರ ಕೃಷ್ಣೇಗೌಡ, ದಿವಾಕರ, ಸಣ್ಣೈದೇಗೌಡ, ಮಹೇಶ್, ಮಾದೇವ, ಚಂದ್ರು, ಜವರಯ್ಯ ಸೇರಿದಂತೆ ಹಲವಾರು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಣಬ ಗ್ರಾಮ ನನ್ನ ತಾಯಿ ಮನೆ ಇದ್ದಂತೆ. ಗ್ರಾಮದ ಜನತೆ ನನ್ನನ್ನು ಮೊದಲಿನಿಂದಲೂ ಮನೆ ಮಗನಂತೆ ಪ್ರೀತಿಸಿ ಬೆಳೆಸಿದ್ದಾರೆ. ನಾನು ಕಂಟ್ರಾಕ್ಟರ್ ವೃತ್ತಿ ಮಾಡುತ್ತಿದ್ದಾಗಿನಿಂದಲೂ ನನ್ನನ್ನು ಬೆಳೆಸಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಂದ ಗುಂಪು ಮಾಡಿಕೊಂಡಿದ್ದರು. ನಾನು ಸಚಿವನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಕೆರೆ ಅಭಿವೃದ್ದಿಪಡಿಸಿದ್ದೇನೆ. ಅದರಿಂದ ವರ್ಷವಿಡಿ ಕೃಷಿಗೆ ನೆರವಾಗಲಿದೆ. ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಿ ಕೆಲಸ ಆರಂಭಿಸಿದ್ದೇವೆ. ಕಾಲೂನಿಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ದೇವಸ್ಥಾನ ಉದ್ಘಾಟನೆಗೂ ಕ್ರಮ ವಹಿಸಲಾಗಿದೆ. ಗ್ರಾಮದ ಜನತೆ ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ಗ್ರಾಮದ ಅಭಿವೃದ್ಧಿ ಮತ್ತು ಒಗ್ಗಟ್ಟು ಕಾಪಾಡುವ ಉದ್ದೇಶದಿಂದ ಜೆಡಿಎಸ್ ಸೇರ್ಪಡೆಗೊಂಡಿದ್ದೀರಿ. ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖವಾದ ಅಭಿವೃದ್ದಿಗೆ ಶ್ರಮಿಸುತ್ತೇನೆ. ದ್ವೇಷ ಅಸೂಯೆಯನ್ನು ಬಿಟ್ಟು ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಒಂದೇ ತಾಯಿ ಮಕ್ಕಳಂತೆ ಜೀವನ ನಡೆಯೋಣ ಎಂದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು