ಅಂತ್ಯ ಸಂಸ್ಕಾರಕ್ಕೂ ರೆಡಿಯಾಯ್ತು ಇವೆಂಟ್ ಮ್ಯಾನೇಜ್ಮೆಂಟ್

40 ಸಾವಿರಕ್ಕೆ ಶವ ಸಂಸ್ಕಾರ, ಅಸ್ಥಿ ವಿಸರ್ಜನೆ, ತಿಥಿ, ಊಟೋಪಾಚಾರ ಎಲ್ಲವೂ ಪ್ಯಾಕೇಜ್‌

ಅಡ್ವಾನ್ಸ್‌ ಬುಕಿಂಗ್‌ ಕೂಡ ಉಂಟು 

ಮದುವೆ, ನಿಶ್ಚಿತಾರ್ಥ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಇರುವುದು ನೋಡಿದ್ದೇವೆ. ಕೇಳಿದ್ದೇವೆ, ಆದರೆ, ಈಗ ಅಂತ್ಯ ಸಂಸ್ಕಾರಕ್ಕೂ ಇವೆಂಟ್ ಮ್ಯಾನೇಜ್ಮೆಂಟ್ ಬಂದಿದೆ. ಆಶ್ಚರ್ಯ ಆದ್ರೂ ಇದು ಸತ್ಯ. ಅಂತ್ಯ ಸಂಸ್ಕಾರದಿಂದ ಅಸ್ಥಿ ವಿಸರ್ಜನೆ ಮಾಡುವ ತನಕ ಎಲ್ಲಾ ಕಾರ್ಯವನ್ನು ಇವೆಂಟ್ ಮ್ಯಾನೇಜ್ಮೆಂಟ್ ನವರೆ ಮಾಡುತ್ತಾರೆ. ಆದರೆ ಕೈ  ತುಂಬಾ ಹಣ ಇರಬೇಕು ಅಷ್ಟೆ.
ಸುಶಾಂತ್ ಫ್ಯೂನರಲ್ ಎಂಬ ಸಂಸ್ಥೆ ಇಂತಹ ಸೇವೆ ಆರಂಭಿಸಿದೆ.
ಯಾರಾದರೂ ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ಮಾಡಲು ದಿಕ್ಕೆ ತೋಚುವುದಿಲ್ಲ. ದುಃಖದಲ್ಲಿ ಅಂತ್ಯಸಂಸ್ಕಾರದ ಸಾಮಾನು ತರಲು ಪರದಾಡಬೇಕು. ಇಂತಹ ಸಮಯದಲ್ಲಿ ಸುಶಾಂತ್ ಫ್ಯೂನರಲ್ ಸಂಸ್ಥೆಗೆ ಇದರ ಹೊಣೆ ವಹಿಸಿದ್ರೆ ಸಾಕು. ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮನೆಯಿಂದ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯತ್ತಾರೆ. ಇದಕ್ಕೂ ಮೊದಲು ಪತ್ರಿಕೆಗಳಿಗೆ ಜಾಹಿರಾತು ನೀಡುತ್ತಾರೆ. ನಂತರ ಸಂಪ್ರದಾಯದಂತೆ ಪುರೋಹಿತರನ್ನು ಕರೆಸಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ನೀವು ಅಳುತ್ತಾ ಕೈ ಕಟ್ಟಿ ನಿಂತರೆ ಸಾಕು.
ಅಂತ್ಯಸಂಸ್ಕಾರದ ತರುವಾಯ ಅವರೆ ಅಸ್ಥಿ ಕೂಡ ವಿಸರ್ಜನೆ ಮಾಡುತ್ತಾರೆ. ತಿಥಿ ಕಾರ್ಯಕ್ಕೆ ಊಟದ ಜವಾಬ್ದಾರಿ ಕೂಡ ಅವರೆ ಹೊರುತ್ತಾರೆ.
ಅಂತ್ಯಸಂಸ್ಕಾರ ಕಾರ್ಯಕ್ಕೆ 40 ಸಾವಿರ ಚಾರ್ಜ್ ಮಾಡುತ್ತಾರೆ. ಉಳಿದಂತೆ ಸಂಸ್ಥೆಗೆ ಏನೇನು ಜವಾಬ್ದಾರಿ ವಹಿಸಲಾಗುತ್ತದೆಯೊ ಅದಕ್ಕೆ ಪ್ಯಾಕೇಜ್ ಫಿಕ್ಸ್ ಮಾಡುತ್ತಾರೆ.
ಕೊನೆಯ ಪ್ರಯಾಣ ಹೀಗೆ ಇರಬೇಕೆಂದು ನಿಶ್ಚಯ ಮಾಡಿ ಬದುಕಿರುವಾಗಲೆ ಅಡ್ವಾನ್ಸ್ ಬುಕಿಂಗ್ ಕೂಡ ಮಾಡಲು ಅವಕಾಶ ಇದೆ.
ಈಗ ಮುಂಬೈ ಹಾಗೂ ನವಿ ಮುಂಬೈನಲ್ಲಿ ಮಾತ್ರ ಇರುವ ಸೇವೆಯನ್ನು ಬೆಂಗಳೂರು, ಮೈಸೂರು ಸೇರಿದಂತೆ ಇತರೆ ನಗರಗಳಿಗೆ ವಿಸ್ತರಿಸಲು ಸುಶಾಂತ್ ಫ್ಯೂನರಲ್ ಸಂಸ್ಥೆ ಮುಂದಾಗಿದೆ.
 
ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು