ಟಿ.ನರಸೀಪುರ: ನುಗ್ಗಳ್ಳಿ ಕೊಪ್ಪಲು ಗ್ರಾಮದ ಬಳಿ ಚಿರತೆ ದಾಳಿ
ಡಿಸೆಂಬರ್ 18, 2022
ತಿ.ನರಸೀಪುರ : ತಾಲ್ಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನುಗ್ಗಳ್ಳಿಕೊಪ್ಪಲು ಗ್ರಾಮದ ಸತೀಶ್(33)ವರ್ಷ ಚಿರತೆ ದಾಳಿಗೆ ಒಳಗಾದ ವ್ಯಕ್ತಿ. ಸತೀಶ್ ತಮ್ಮ ಜಮೀನಿನಲ್ಲಿ ನೀರು ಕಟ್ಟಲು ಹೋದಾಗ ಏಕಾಏಕಿ ಚಿರತೆ ದಾಳಿ ನಡೆಸಿದೆ. ಚಿರತೆಯಿಂದ ಬಿಡಿಸಿಕೊಂಡು ಸತೀಶ್ ಗ್ರಾಮಕ್ಕೆ ಓಡೋಡಿ ಬಂದರು. ಗಾಯಗೊಂಡಿದ್ದ ಸತೀಶ್ ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕರೆತಂದು ಅನಂತರ ಮೈಸೂರಿಗೆ ಕರೆದೊಯ್ಯಲಾಯಿತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
0 ಕಾಮೆಂಟ್‌ಗಳು