ಮೈಸೂರು : ರೌಡಿ ಶೀಟರ್ ಆರ್‍ಎಕ್ಸ್ ಮನು ಗಡಿಪಾರು ಮಾಡಿದ ಬೆನ್ನಲ್ಲೆ ಮೈಸೂರಿನ ಮತ್ತೊಬ್ಬ ರೌಡಿ ಶೀಟರ್ ಅಕ್ಮಲ್ ಪಾಷ ಅಲಿಯಾಸ್ ಪೋಕ್ಲೈನ್ ಎಂಬಾತನನ್ನೂ ಸಹ 6 ತಿಂಗಳ ಕಾಲ ಮೈಸೂರಿನಿಂದ ಗಡಿಪಾರು ಮಾಡಲಾಗಿದೆ. ಗೌಸಿಯಾನಗರ ಬಡಾವಣೆಯ ಅಕ್ಮಲ್ ಪಾಷ ವಿರುದ್ಧ ಉದಯಗಿರಿ, ದೇವರಾಜ, ಲಷ್ಕರ್ ಪೊಲೀಸ್ ಠಾಣೆಯಲ್ಲಿ 9 ಪ್ರಕರಣ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದನು. ಶಿಕ್ಷೆಯಾದ ನಂತರ ನ್ಯಾಯಾಲಯದಲ್ಲಿ ಷರತ್ತು ಬದ್ಧ ಜಾಮೀನು ಪಡೆದು ಹೊರಬಂದ ನಂತರವೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ತನ್ನ ವಿರುದ್ದ ದಾಖಲಾಗಿರುವ ಪ್ರಕರಣಗಳ ಸಾಕ್ಷಿದಾರರುಗಳಿಗೆ ಬೆದರಿಸಿ ಭಯ ಉಂಟು ಮಾಡಿ ತನ್ನ ವಿರುದ್ದ ಸಾಕ್ಷಿ ನುಡಿಯದಂತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದನು ಎಂದು ಪೊಲೀಸರು ಆರೋಪಿಸಿ ಮುಂದಿನ 6 ತಿಂಗಳ ಅವಧಿವರೆಗೆ ಮೈಸೂರು ನಗರದಿಂದ ರಾಮನಗರ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುವಂತಹ ಮಾಹಿತಿ ತಿಳಿದುಬಂದಲ್ಲಿ ಉಳಿದ ರೌಡಿಗಳ ವಿರುದ್ದವು ಗಡಿಪಾರು ಮಾಡುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ.
0 ಕಾಮೆಂಟ್‌ಗಳು