ಗುಜರಾತ್ ಚುನಾವಣೆ: ಜಿಗ್ನೇಶ್ ಮೇವಾನಿ ಎರಡನೇ ಬಾರಿ ಭರ್ಜರಿ ಗೆಲುವು

ವಡ್ಗಾಂ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದರೂ ಪಕ್ಷದ ಅಭ್ಯರ್ಥಿ, ದಲಿತ ನಾಯಕ ಜಿಗ್ನೇಶ್ ಮೇವಾನಿ ವಡ್ಗಾಂ ಕ್ಷೇತ್ರದಿಂದ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ.
ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಣಿಭಾಯ್ ವಘೇಲಾ ವಿರುದ್ಧ ಸುಮಾರು ೨೫೦೦ ಮತಗಳ ಅಂತರದಲ್ಲಿ ಜಿಗ್ನೇಶ್ ಜಯಗಳಿಸಿದ್ದಾರೆ.