ದೆಹಲಿ ಎಮ್‌ಸಿಡಿ ಚುನಾವಣೆಯಲ್ಲಿ ಆಪ್ ಜಯಭೇರಿ : ಹನೂರಿನಲ್ಲಿ ಕಾರ್ಯಕರ್ತರ ಸಂಭ್ರಮ

-ಶಾರೂಕ್ ಖಾನ್. ಹನೂರು
ಚಾಮರಾಜನಗರ: ಕಳೆದ ಹದಿನೈದು ವರ್ಷಗಳಿಂದ ದೆಹಲಿಯ  ಮಹಾನಗರ ಪಾಲಿಕೆ ಗದ್ದುಗೆಯಲ್ಲಿದ್ದ ಬಿಜೆಪಿ ಪಕ್ಷದ ಅಧಿಕಾರವನ್ನು ಆಮ್‍ಆದ್ಮಿ ಪಾರ್ಟಿ ಕಿತ್ತುಕೊಂಡಿದ್ದು, ಆಪ್ ಗೆಲುವಿಗೆ ಹನೂರಿನಲ್ಲಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.   
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 250 ಸ್ಥಾನಗಳಲ್ಲಿ 134 ಸ್ಥಾನಗಳನ್ನು ಗೆದ್ದು ಪ್ರಚಂಡ ವಿಜಯ ಸಾಧಿಸಿದ್ದು, ಸುಮಾರು 15 ವರ್ಷಗಳ ಬಿಜೆಪಿ ಆಡಳಿತ ಇಲ್ಲಿ ಕೊನೆಗೊಂಡಿದೆ. ದೆಹಲಿಯ ಜನರು ಜಾತಿ, ಮತ, ಧರ್ಮ ನೋಡದೆ ಅಭಿವೃದ್ಧಿಗೆ ಮತ ಚಲಾಯಿಸಿದ್ದಾರೆ. ಇದೇ ರೀತಿ ನಮ್ಮ ಹನೂರು ಕ್ಷೇತ್ರದಲ್ಲೂ ಜನರು ಹಣ ಹೆಂಡಕ್ಕೆ ಮಾರುಹೋಗದೆ ಜಾತಿ, ಮತ, ಧರ್ಮ ನೋಡದೆ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದು ಹನೂರು ವಿಧಾನಸಭಾ ಕ್ಷೇತ್ರದ ಆಮ್ ಆದ್ವಿ ಪಕ್ಷದ ಅಭ್ಯರ್ಥಿ ನಾಗೇಂದ್ರ ಮತ್ತಿಪುರ ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು