ಶಾರೂಕ್ ಖಾನ್, ಹನೂರು ಹನೂರು: ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾಪಂ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಚೆಕ್ ಡ್ಯಾಮ್‍ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಕೈಯಲ್ಲಿ ಮೀನು ಹಿಡಿಯುವ ಬಲೆ ಇದ್ದು, ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ. ಎಡ ಕೈಯಲ್ಲಿ ಮಂಜು, ರಾಜು ಬಾಯಿ, ಎದೆ ಭಾಗದಲ್ಲಿ ಪಲ್ಲವಿ ಎಂಬ ಹಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಶವವನ್ನು ನೀರಿನಿಂದ ಮೇಲೆತ್ತಲು ನೆರವಾದರು. ಅಗ್ನಿಶಾಮಕ ಸಿಬ್ಬಂದಿಗಳಾದ ರವಿ, ಗಿರೀಶ್, ನವೀನ್, ಗುರುಮೂರ್ತಿ, ಶಿವಣ್ಣ, ಮುನಿಶಾಂತ ಹಾಗೂ ಪೊಲೀಸ್ ಸಿಬ್ಬಂದಿ ಎಸ್. ರವಿ ಇದ್ದರು.
0 ಕಾಮೆಂಟ್‌ಗಳು