ಸ್ವಂತ ಹಣದಲ್ಲಿ ಕೆರೆ ಏರಿ ದುರಸ್ತಿ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಡಾ.ಇಂದ್ರೇಶ್

ಪಾಂಡವಪುರ : ಒಂದು ವರ್ಷದಿಂದ ಗ್ರಾಮದ ಜನ ಸಂಚಾರಕ್ಕೆ ತೀವ್ರ ಅನಾನುಕೂಲವಾಗಿ ಹದಗೆಟ್ಟಿದ್ದ ರಸ್ತೆಯನ್ನು ಸ್ವಂತ ಹಣದಲ್ಲಿ ರಿಪೇರಿ ಮಾಡಿಸುವ ಮೂಲಕ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾಲೂಕಿನ ಜಕ್ಕನಹಳ್ಳಿ ಸಮೀಪದ ಕುಗ್ರಾಮ ಕಜ್ಜಿಕೊಪ್ಪಲು ಬಳಿಯ ಚಿಕ್ಕಕೆರೆ ಏರಿಯನ್ನು ಡಾ.ಇಂದ್ರೇಶ್ ಇಂದು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ದುರಸ್ಥಿ ಮಾಡಿಸಿದರು.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಜ್ಜಿಕೊಪ್ಪಲು ಗ್ರಾಮದ ಕೆರೆ ಏರಿ ಒಡೆದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. 
ಗ್ರಾಮಸ್ಥರು ರಸ್ತೆ ರಿಪೇರಿ ಮಾಡಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಇದರಿಂದ ಬೇಸತ್ತ ಗ್ರಾಮಸ್ಥರು, ಬಿಜೆಪಿ ಯುವ ಮುಖಂಡ ಡಾ.ಇಂದ್ರೇಶ್ ಬಳಿ ತೆರಳಿ, ತಮ್ಮ ಗ್ರಾಮದ ಕೆರೆ ಏರಿಯ ರಸ್ತೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಡಾ.ಇಂದ್ರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಾವೇ ಸ್ವತಃ ಸ್ಥಳದಲ್ಲಿ ಹಾಜರಿದ್ದು, ಜೆಸಿಬಿ ಯಂತ್ರಗಳ ಮೂಲಕ ಕೆರೆ ಏರಿಯನ್ನು ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದು
ಗ್ರಾಮಸ್ಥರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಪುಟ್ಟರಾಜು, ಬಾಬು, ನಾಗಣ್ಣ, ರಾಮಣ್ಣ ಸೇರಿದಂತೆ ಅನೇಕರು ಡಾ.ಇಂದ್ರೇಶ್ ಸೇವಾ ಕಾರ್ಯವನ್ನು ಶ್ಲಾಘಿಸಿದರು. 
ಜಕ್ಕನಹಳ್ಳಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್‍ಎನ್‍ಟಿ ಸೋಮಶೇಖರ್, ರಾಜೀವ್, ಚಿಕ್ಕಮರಳಿ ನವೀನ್, ಕಡಬ ಪುಟ್ಟರಾಜ್ ಮುಂತಾದವರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು