ಪಿರಿಯಾಪಟ್ಟಣದ ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ : ಬಾಲ ಏಸುವಿನ ವಿಗ್ರಹ ಧ್ವಂಸಗೊಳಿಸಿರುವ ದುಷ್ಕರ್ಮಿಗಳು
ಡಿಸೆಂಬರ್ 27, 2022
ಪಿರಿಯಾಪಟ್ಟಣ: ಪಟ್ಟಣದ ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ದಾಳಿ ನಡೆಸಿರುವ ಕೆಲವು ದುಷ್ಕರ್ಮಿಗಳು ಚರ್ಚ್ನ ಆವರಣದಲ್ಲಿದ್ದ ಬಾಲ ಯೇಸುವಿನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಮAಗಳವಾರ ಬೆಳಗಿನ ಪೂಜೆಯ ನಂತರ ಚರ್ಚ್ನ ಫಾದರ್ ಜಾನ್ ಪೌಲ್ ಕರ್ತವ್ಯ ನಿಮಿತ್ತ ಮೈಸೂರಿಗೆ ತೆರಳಿದ್ದರು. ಚರ್ಚ್ ನಲ್ಲಿ ಕೆಲಸಕ್ಕೆ ಇದ್ದ ಮಹಿಳೆಯು ಸಹ ರಜೆ ನಿಮಿತ್ತ ಮನೆಗೆ ಹೋಗಿದ್ದರು. ಸಂಜೆ ೬ ಗಂಟೆ ಸಮಯದಲ್ಲಿ ಚರ್ಚ್ನ ಸಿಬ್ಬಂದಿ ರಾಜಣ್ಣ ಎಂಬುವವರು ಚರ್ಚ್ಗೆ ಲೈಟ್ ಹಾಕಿ ಗಂಟೆ ಹೊಡೆಯಲು ಬಂದಾಗ ಚರ್ಚ್ನ ಹಿಂಬಾಗಿಲು ತೆರೆದಿರುವುದು ಹಾಗೂ ಹೂ ಕುಂಡಗಳನ್ನು ಒಡೆದು ಹಾಕಿರುವುದು ಗಮನಕ್ಕೆ ಬಂದಿದೆ. ಆತಂಕಗೊAಡ ರಾಜಣ್ಣ ಕೂಡಲೇ ಚರ್ಚ್ನ ಲೈಟ್ ಹಾಕಿ ಗಮನಿಸಿದಾಗ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚ್ನ ಒಳಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಬಾಲ ಯೇಸುವಿನ ತೊಟ್ಟಿಲು ಮತ್ತು ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಬಾಲಯೇಸುವಿನ ತೊಟ್ಟಿಲನ್ನು ವೇದಿಕೆಯ ಮೇಲಿಂದ ಮುಂಭಾಗಕ್ಕೆ ಬಿಸಾಡಿರುವುದು ಕಂಡುಬAದಿದೆ. ಬಾಲ ಯೇಸುವಿನ ಪ್ರತಿಮೆಯೊಂದಿಗೆ ಅಲಂಕಾರಕ್ಕೆ ಜೋಡಿಸಲ್ಪಟ್ಟಿದ್ದ ಗಾಜಿನ ಪದಾರ್ಥಗಳನ್ನು ಸಹ ಎಲ್ಲೆಂದರಲ್ಲಿ ಎಸೆದು ಒಡೆದು ಹಾಕಿದ್ದಾರೆ. ಅಲ್ಲದೇ ದುಷ್ಕರ್ಮಿಗಳು ಚರ್ಚ್ನ ಹೊರ ಭಾಗದಲ್ಲಿ ನಿರ್ಮಿಸಲಾಗಿರುವ ಬಾಲಸುವಿನ ಪ್ರತಿಮೆ ಮುಂಭಾಗದಲ್ಲಿದ್ದ ಹೂ ಕುಂಡಗಳನ್ನು ಸಹ ಒಡೆದು ಹಾಕಿ ಸಮೀಪದಲ್ಲಿಯೇ ಇದ್ದ ಹಣದ ಹುಂಡಿಯನ್ನು ಕಳವು ಮಾಡಿದ್ದಾರೆ. ಚರ್ಚ್ನ ಮತ್ತೊಂದು ಬದಿಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿರುವ ದುಷ್ಕರ್ಮಿಗಳು ದೊಡ್ಡ ಇಟ್ಟಿಗೆಯಿಂದ ಬಾಗಿಲನ್ನು ಒಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಮೈಸೂರು ಮತ್ತು ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ಮಾಡುತ್ತಿದ್ದು, ದಾಳಿಯಲ್ಲಿ ಯಾರ ಕೈವಾಡವಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
0 ಕಾಮೆಂಟ್‌ಗಳು