ರಂಗಭೂಮಿ ಕಲಾವಿದೆ ಚೈತ್ರರಿಗೆ ಬಂಗಾರದ ಕಡಗ ಉಡುಗೊರೆಯಾಗಿ ನೀಡಿದ ಕಲಾವಿದರು

ಗ್ರಾಮೀಣ ನಾಟಕಗಳನ್ನು ಶ್ರೀಮಂತಗೊಳಿಸಲು ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಸಲಹೆ  

ಟಿ.ಬಿ.ಸಂತೋಷ, ಮದ್ದೂರು
ಮದ್ದೂರು: ರಂಗಭೂಮಿ ಕಲೆಯಾದ ನಾಟಕಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಇದರಿಂದ ರಂಗಭೂಮಿ ಶ್ರೀಮಂತವಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಗುರುಚರಣ್ ಹೇಳಿದರು. 
ತಾಲೋಕಿನ ಭಾರತಿನಗರದ ಕೇಂಬ್ರಿಡ್ಜ್ ಕಾನ್ವೆಂಟ್ ಆವರಣದಲ್ಲಿ  ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶ್ವ ಮಾನವ ರಂಗಭೂಮಿ ಕಲಾವಿದರ ಸೇವಾ ಟ್ರಸ್ಟ್ ತನ್ನ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ತೊರೆಚಾಕನಹಳ್ಳಿ ಶಂಕರೇಗೌಡ ವಿರಚಿತ ಬಂಗಾರದ ಗುಡಿ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.  
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಿಗೆ ಮಾರುಹೋಗಿ ರಂಗಭೂಮಿ ಮತ್ತು ಗ್ರಾಮೀಣ ಕಲೆಗಳನ್ನು ಮರೆಯುತ್ತಿದ್ದಾರೆ. ಇದಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ಚೈತ್ರ ಅವರ ಕಲಾಸೇವೆಯನ್ನು ಪರಿಗಣಿಸಿ ಬಂಗಾರದ ಕಡಗವನ್ನು ಉಡುಗೊರೆಯಾಗಿ ನೀಡಲಾಯಿತು.
ಗ್ರಾಪಂ ಸದಸ್ಯ ಶ್ರೀನಿವಾಸ್, ಮಿಥುನ್ ಕುಮಾರ್, ಗುಡಿಗೆರೆ ರಾಮಚಂದ್ರ, ಮಣಿಗೆರೆ ರಾಮಚಂದ್ರ, ಮೆಳ್ಳಹಳ್ಳಿ ವಿನಯ್, ಹಾರೋಕೊಪ್ಪ ಪ್ರೇಮ್ ಕುಮಾರ್, ಕೆ.ಶೆಟ್ಟಹಳ್ಳಿ ಪುಟ್ಟಸ್ವಾಮಿಗೌಡ ಮುಂತಾದವರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು