ಆನೆದಂತ ಮಾರಾಟಕ್ಕೆ ಯತ್ನ : ಮತ್ತೇ ಮೂವರ ಬಂಧನ

 ಗುಂಡ್ಲುಪೇಟೆ : ಆನೆದಂತ ಅಕ್ರಮವಾಗಿ ಮಾರಾಟ ಸಂಬAಧ ಬಂಧಿತರಾಗಿರುವ ಐವರು ಆರೋಪಿಗಳೊಂದಿಗೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಲಾಗಿದೆ.
ತಮಿಳುನಾಡು ಮೂಲದ ರಂಗಸ್ವಾಮಿ, ಸಂಜೀವಕುಮರ್, ಎನ್.ವಿನೋತ್, ಕತಿರೇಸನ್, ಸೆಲ್ವ ನಾಯಗಂರನ್ನು ಮೂರು ದಿನದ ಹಿಂದೆ ಬಂಧಿಸಲಾಗಿತ್ತು.
ಈಗ ಬಾಲನ್,ಅರ್ಜುನ್ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಿ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಬಂಡೀಪುರ ಬಫರ್ ಜೋನ್ ವಲಯ ವ್ಯಾಪ್ತಿಯ ಬಸವನಪುರ ಗ್ರಾಮದ ಬಳಿಯ ಒಂಟೆ ಫಾರಂ ಬಳಿ ಈ ಐದು ಜನ ಆರೋಪಿಗಳು ಎರಡು ಆನೆದಂತಗಳನ್ನು ಅಕ್ರಮ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಐದು ಜನರನ್ನು ಬಂಧಿಸಿ ಪರಾರಿಯಾಗಿದ್ದ ಮೂವರನ್ನು ಅರಣ್ಯಾಧಿಕಾರಿಗಳು ನಂತರ ಬಂಧಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು