ಜೆಡಿಎಸ್‌ ಮುಖಂಡ ಮಂಜುನಾಥ್‌ ಸಖ್ಯ ತ್ಯಜಿಸಿ ಬಿಜೆಪಿಯ ನಿಶಾಂತ್‌ ಕೈ ಹಿಡಿದ ಪೊನ್ನಾಚಿ ಮಹದೇವಸ್ವಾಮಿ

ಕೊಳ್ಳೇಗಾಲ: ಹನೂರು ತಾಲ್ಲೂಕಿನ ಜೆಡಿಎಸ್ ಮುಖಂಡ ಮಂಜುನಾಥ್‌, ಕಾರ್ಯಕರ್ತರ ನೋವಿಗೆ ಸ್ಪಂದಿಸದ ಕಾರಣ ಬಿಜೆಪಿ ಮುಖಂಡ ನಿಶಾಂತ್‌ ಅವರಿಗೆ ತಮ್ಮ ಬೆಂಬಲ ಸೂಚಿಸುವುದಾಗಿ ಲಿಂಗಾಯತ ಸಮುದಾಯದ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಹೇಳಿದರು.
ತಾಲೂಕಿನ ಮದುವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್‌ ನಲ್ಲಿ ಏರ್ಪಡಿಸಿದ್ದ ತಮ್ಮ ಬೆಂಬಲಿಗರು ಹಾಗೂ ಸಮಾನ ಮಸ್ಕರ ಚಿಂತನ ಮಂಥನ ಸಭೆಯಲ್ಲಿ ಅವರು ಮಾತನಾಡಿ,
ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರನ್ನು ಬೆಂಬಲಿಸಿದ್ದವು, ಆದರೂ ಅವರು ಸೋತರು. ನಂತರ ಜೆಡಿಎಸ್ ಪಕ್ಷಕ್ಕೆ ದುಡಿದ ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸದೆ ಉದಾಸೀನ ತೋರಿದ್ದರು. ಈ ಕಾರಣದಿಂದ ನಾವು ಮಂಜುನಾಥ್‌ ಅವರ ಸಖ್ಯ ಬಿಡಬೇಕಾಯಿತು. ಈಗ ಸಮಾಜ ಸೇವಕ ಬಿಜೆಪಿ ಮುಖಂಡ ನಿಶಾಂತ್  ಅವರು ಕ್ಷೇತ್ರದ ಅಭಿವೃದ್ಧಿಗೆ ಉದಾಸೀನ ತೋರದೆ ಸುಳ್ಳು ಭರವಸೆ ನೀಡದೆ ಅಧಿಕಾರ ಇಲ್ಲದಿದ್ದರೂ ಕಾಡಂಚಿನ ಗ್ರಾಮದ ಜನರಿಗೆ ತಮ್ಮ ಸ್ವಂತ ಹಣದಿಂದ ಹಸುಗಳನ್ನು ನೀಡಿದ್ದು, ನೊಂದವರಿಗೆ ಸ್ಪಂದಿಸುತ್ತಾ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಹಾಲಿ ಅವರು ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು ಎಲ್ಲರ ಅಭಿಪ್ರಾಯ ಕೇಳಿ ಒಗ್ಗಟ್ಟಿನಿಂದ ನಿರ್ಣಯ ಮಾಡಿ ಬೆಂಬಲ ಸೂಚಿಸಿದ್ದೇವೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ನಿಶಾಂತ್‌ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲ ಕೊಡುತ್ತಿರುವುದು ಸಂತೋಷದ ವಿಷಯ. ನಿಮ್ಮ ನಂಬಿಕೆಯನ್ನು ಖಂಡಿತವಾಗಿ ಉಳಿಸಿಕೊಳ್ಳುತ್ತೇನೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿದೆ. ಇಲ್ಲಿನ ಜನ ಪ್ರಶ್ನೆ ಮಾಡುವವರು ಕಡಿಮೆ. ಹದಿನೈದು ವರ್ಷ ಕಳೆದರೂ ಒಂದು ರಸ್ತೆ ಅಭಿವೃದ್ಧಿಯಾಗಿಲ್ಲ. ಹನೂರು ಕ್ಷೇತ್ರವು ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕಕಿಂತಲೂ ಹಿಂದುಳಿದಿದೆ. ನಿಮ್ಮೆಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆ ಹೆಜ್ಜೆ ಹಾಕೋಣ ಎಂದು ತಿಳಿಸಿದ್ದರು,
ಸಂಧರ್ಭದಲ್ಲಿ ಪಾಳ್ಯ ರಾಚಪ್ಪಕಾಮಗೆರೆ ಗುರುಸ್ವಾಮಿ, ಮಂಗಲ ರಾಜೇಶೇಖರ್ಪಿ.ಜಿ. ಪಾಳ್ಯ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ, ಪೋನಚ್ಚಿ ರಾಜಶೇಖರ್, ಉಗೇನಿಯ ಮೂರ್ತಿ ಇನ್ನಿತ್ತರು ಇದ್ದರು,
 
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು