ಅರಕಲಗೂಡು ಬಳಿ ಬೈಕ್-ಗೂಡ್ಸ್ ನಡುವೆ ಭೀಕರ ರಸ್ತೆ ಅಪಘಾತ : ಕೊಡಗಿನ ಇಬ್ಬರು ವ್ಯಕ್ತಿಗಳು ಸಾವು


ಹಾಸನ : ಅರಕಲಗೂಡು ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗಿನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದ ಮಾರ್ಕೆಟ್ ರಸ್ತೆ ನಿವಾಸಿಗಳಾದ ಉಮರ್ (47) ಮತ್ತು ಮೂರ್ತಿ (39) ಮೃತ ದುರ್ದೈವಿಗಳು.
ಮೂರ್ತಿಯ ಕೈ ಚಿಕಿತ್ಸೆಗೆಂದು ಹಾಸನ ಜಿಲ್ಲೆಯ ಅರಕಲಗೋಡಿಗೆ ಬೈಕಿನಲ್ಲಿ ಇಬ್ಬರೂ ತೆರಳಿದ್ದರು. ಚಿಕಿತ್ಸೆ ಪಡೆದು ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಉಮರ್ ಮತ್ತು ಮೂರ್ತಿ ಇದ್ದ ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು