ಅಧಿಕಾರಿಗಳ ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯಕ

ಮೈಸೂರು : ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ದೃಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಇದು ಅವಶ್ಯಕವೂ ಹೌದು ಎಂದು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಎ.ರವಿಶಂಕರ್‌ ಹೇಳಿದರು.
ನಗರದ ಓವಲ್‌ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಮೈಸೂರು ಜಿಲ್ಲೆ ಅಬಕಾರಿ ಇಲಾಖೆ ಆಯೋಜಿಸಿದ್ದ ಅಬಕಾರಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಬಕಾರಿ ಇಲಾಖೆಯಲ್ಲಿ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು, ಕೋವಿಡ್‌ ಸೇರಿದಂತೆ ಮತ್ತಿತರ ಆಡಳಿತಾತ್ಮಕ ಕಾರಣದಿಂದ ಕಳೆದ ೭ ವರ್ಷದಿಂದ ಕ್ರೀಡಾಕೂಟ ನಡೆದಿರಲಿಲ್ಲ. ಇತ್ತೀಚೆಗೆ ಇಲಾಖೆಯಲ್ಲಿ ನೇಮಕಾತಿ ನಡೆದು ಹೊಸ ಹೊಸ ಯುವ ಅಧಿಕಾರಿಗಳ ಆಗಮನವಾಗಿದೆ. ಅಧಿಕಾರಿಗಳಲ್ಲಿ ದಕ್ಷತೆ, ಕಾರ್ಯಕ್ಷಮತೆ, ಉತ್ಸಾಹ, ಮಾನಸಿಕ ಒತ್ತಡದ ನಿಯಂತ್ರಣ ಮಾಡಲು ಕ್ರೀಡೆಗಳು ಅತ್ಯಾವಶ್ಯಕ ಇದರಿಂದಾಗಿ ಈ ಸಾಲಿನಲ್ಲಿ ಕ್ರೀಡಾಕೂಟ ಆಯೋಜಿಸಿದ್ದೇವೆ ಎಂದರು.
ಕ್ರೀಡಾಕೂಟದಲ್ಲಿ ಮೂರು ವಿಭಾಗಗಳಾಗಿ ವಿಂಗಡಣೆ ಮಾಡಿದ್ದು. ೪೦ ವರ್ಷ ಒಳಪಟ್ಟವರು, ೪೦ ರಿಂದ ೫೦ ವರ್ಷ ಮತ್ತು ೫೦ ರಿಂದ ೬೦ ವರ್ಷ ವಯೋಮಾನದವರಿಗೆ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸಿದ್ದೇವೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಕ್ರIಡೆಯಲ್ಲಾದರೂ ಭಾಗವಹಿಸಿ ಎಂದು ಕೋರಲಾಗಿದೆ.  ವಯೋಮಾನಕ್ಕೆ ಅನುಗುಣವಾಗಿ ಕಬ್ಬಡ್ಡಿ, ಕ್ರಿಕೆಟ್‌, ಬ್ಯಾಡ್ಮಿಂಟನ್‌, ಅಥ್ಲೆಟಿಕ್‌ ಕ್ರೀಡೆಗನ್ನು ಆಯೋಜಿಸಲಾಗಿದೆ ಎಂದರು.
ಅಬಕಾರಿ ಇಲಾಕೆ ಜಂಟಿ ಆಯುಕ್ತರಾದ ಡಾ.ಬಿ.ಸಿ.ವಿಜಯಕುಮಾರ್‌ ಕ್ರೀಡಾಕೂಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೈಲ್ವೆ ಅಧಿಕಾರಿ ಅಂತಾರಾಷ್ಟ್ರೀಯ ವಾಲಿಬಾಲ್‌ ಕ್ರೀಡಾಪಟು ಮತ್ತು ತರಬೇತುದಾರರಾದ ಹೆಚ್‌.ಎನ್‌.ಹೇಮಲತಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಅಬಕಾರಿ ಉಪ ಆಯುಕ್ತ ಪಿ.ಮಹೇಶ್‌ ಕುಮಾರ್‌ ಮತ್ತಿತರರು ಇದ್ದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು