ಯಶಸ್ಸು ನೀಡುತ್ತಿರುವ ಅರಣ್ಯಾಧಿಕಾರಗಳ ಕಾರ್ಯಾಚರಣೆ: ಟಿ.ನರಸೀಪುರದಲ್ಲಿ ಭಾರಿ ಗಾತ್ರದ ಮತ್ತೊಂದು ಚಿರತೆ ಸೆರೆ
ಡಿಸೆಂಬರ್ 29, 2022
ನಾಗೇಂದ್ರ ಕುಮಾರ್,
ಟಿ.ನರಸೀಪುರ
ಟಿ.ನರಸೀಪುರ : ತಾಲ್ಲೂಕಿನ ಮಾಧವಗೆರೆ ಗ್ರಾಮದಲ್ಲಿ ಭಾರಿ ಗಾತ್ರದ ಮತ್ತೊಂದು
ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು,
ತಾಲ್ಲೂಕಿನ ಜನತೆಗೆ ಒಂದಷ್ಟು
ನೆಮ್ಮದಿ ದೊರಕಿದೆ.
ಅರಣ್ಯ
ಇಲಾಖೆ ಅಧಿಕಾರಿ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆ,
ವಿವಿಧ ಕಾರ್ಯತಂತ್ರಗಳ ಫಲವಾಗಿ ಹಂತ ಹಂತವಾಗಿ ಚಿರತೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಅರಣ್ಯಾಧಿಕಾರಿಗಳ ಹೇಳಿಕೆ
ಪ್ರಕಾರ ಈ ಭಾಗದಲ್ಲಿ ಇಪ್ಪತ್ತು ಚಿರತೆಗಳು ಓಡಾಡುತ್ತಿವೆ ಎನ್ನಲಾಗಿದೆ.
ಅರಣ್ಯ
ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿ, ಇನ್ನುಳಿದ ಚಿರತೆಗಳನ್ನು ಸೆರೆ ಹಿಡಿದು ಸಾರ್ವಜನಿಕರು ನೆಮ್ಮದಿ ಜೀವನ ನಡಸಲು ಸಹಕರಿಸಬೇಕೆಂದು
ಕೋರಿದ್ದಾರೆ.
0 ಕಾಮೆಂಟ್‌ಗಳು