ತಳವರ್ಗದ ಮಕ್ಕಳ ಶಿಕ್ಷಣ ಮೊಟಕುಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಚು ಆರೋಪ : ಪ್ರಾಥಮಿಕ ಶಾಲಾ ವಿದ್ಯಾರ್ಥಿ ವೇತನ ರದ್ಧತಿ ವಿರುದ್ಧ ದಸಂಸ ಪ್ರತಿಭಟನೆ


ಮೈಸೂರು: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ 1 ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಎಸ್‍ಸಿ, ಎಸ್‍ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿ ವೇತನವನ್ನು ರದ್ದು ಪಡಿಸುವ ಮೂಲಕ ತಳವರ್ಗದ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಲು ಸಂಚು ನಡೆಸಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ ಆರೋಪಿಸಿದರು.
ಮೈಸೂರಿನ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ವಿದ್ಯಾರ್ಥಿ ವೇತನ ರದ್ದು ಪಡಿಸಿದ ಕೇಂದ್ರ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. 
ಯಾವುದೇ ದೇಶ ಸದೃಢವಾಗಿ ರೂಪುಗೊಂಡು ಅಭಿವೃದ್ಧಿ ಸಾಧಿಸಬೇಕಾದರೆ
ಆ ದೇಶದಲ್ಲಿ ಶಿಕ್ಷಣದ ಪ್ರಗತಿ ಮುಖ್ಯವಾಗಿರುತ್ತದೆ. ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ
ಶ್ರೇಣೀಕೃತ ವ್ಯವಸ್ಥೆಯಲ್ಲಿ ಬ್ರಾಹ್ಮಣ ಮಹಿಳೆಯರೂ ಸೇರಿದಂತೆ ಶೂದ್ರ, ಆದಿವಾಸಿ, ಅಸ್ಪøಶ್ಯ ಸಮುದಾ ಯಗಳನ್ನು ಶಿಕ್ಷಣದಿಂದ ವಂಚಿಸಲಾಗಿತ್ತು. ಅನಂತರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದಲ್ಲಿ ಅಳಡಿಸಿದ ಮೇಲೆ ದಮನಿತ ವರ್ಗದವರು ಶೈಕ್ಷಣಿಕವಾಗಿ ಮುನ್ನಲೆಗೆ ಬರಲು ಸಾಧ್ಯವಾಗಿ, ಸರ್ಕಾರಗಳು ಸಹ ಇಂತಹ ಮಕ್ಕಳಿಗೆ ವಿವಿಧ ರೀತಿ ಯಲ್ಲಿ ಸಹಾಯವಾಗಲೆಂದು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿವೆ. ಆದರೆ, ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರ ದಿಢೀರನೇ 1 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‍ಸಿ. ಎಸ್‍ಟಿ, ಓಬಿಸಿ, ಮೈನಾರಿಟಿ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಏಕಾಏಕಿ ರದ್ದುಗೊಳಿಸಿರುವುದು ಖಂಡನೀಯ ಇದರಿಂದ ಈ ವರ್ಗದ ಮಕ್ಕಳು ಶಿಕ್ಷಣದಿಂದ ದೂರ ಉಳಿಸುವ ಅಪಾಯವಿದೆ ಎಂದು ಅವರು ದೂರಿದರು.
2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ
ಸರ್ಕಾರವು ದುರ್ಬಲ ವರ್ಗದ ಮಕ್ಕಳು ಶಿಕ್ಷಣದಿಂದ ವಿಮುಖರಾಗಿ ಮತ್ತೇ ಗುಲಾಮಗಿರಿಗೆ
ಸಿಲುಕುವಂತೆ ಮಾಡುವ ಹುನ್ನಾರಗಳು ನಡೆಯುತ್ತಿವೆ. ಒಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಖಾಸಗಿ
ಶಾಲೆಗಳಿಗೆ ಉತ್ತೇಜನ ನೀಡುವುದು, ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಪ್ರಗತಿಪರ
ಶಿಕ್ಷಣ ನೀತಿಗಳನ್ನು ತಿರುಚುತ್ತಾ ಅವೈಚಾರಿಕ ಮತ್ತು ಅವೈಜ್ಞಾನಿಕ ಪಠ್ಯಗಳನ್ನು
ಅಳವಡಿಸಿ, ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತಿದೆ. ಇದರಿಂದ ಮಕ್ಕಳಲ್ಲಿ ಮತಾಂಧ ಮನಸ್ಥಿತಿಯನ್ನು
ಹುಟ್ಟುಹಾಕಿ, ಮನುವಾದಕ್ಕೆ ಮರುಹುಟ್ಟುಕೊಡಲು ಹೊಸ ಶಿಕ್ಷಣ ನೀತಿಗಳನ್ನು ಸರ್ಕಾರ
ಜಾರಿಗೊಳಿಸಿರುವುದು ಖಂಡನೀಯ ಎಂದರು. 
ಕೂಡಲೇ ವಿದ್ಯಾರ್ಥಿ ವೇತನ ರದ್ಧತಿ ಆದೇಶವನ್ನು ಹಿಂಪಡೆದು ಕೂಡಲೇ ವಿದ್ಯಾರ್ಥಿ ವೇತನದ ಮೊತ್ತವನ್ನು
ಮತ್ತ?À್ಟು ಹೆಚ್ಚಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡುª ಮೂಲಕÀ ಶಾಲಾ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಗ್ರ ನರಸಿಂಹೇಗೌಡ, ಬಕ್ಕಳೆ ನಂಜುಂಡಸ್ವಾಮಿ, ಕಂದೇಗಾಲ ಶಿವಣ್ಣ, ಬಿಳಿಕೆರೆ ದೇವರಾಜು, ತಳೂರು ಸಂತೋಷ, ಗೋವಿಂದರಾಜು, ಪ್ರಭು, ಮಂಜುನಾಥ್, ಮರುಗಡಹಳ್ಳಿ ಮಹದೇವು ಮುಂತಾದವರು ಭಾಗವಹಿಸಿದ್ದರು.
ಮಕ್ಕಳಿಂದಲೇ ತಿಂಗಳಿಗೆ 100 ರೂ. ವಸೂಲಿ, ವಿದ್ಯಾರ್ಥಿ ವೇತನ, ಶಿಷ್ಯವೇತನ
ನೀಡುವ ಯೋಜನೆಗಳ ಸ್ಥಗಿತ, ಶಿಕ್ಷಣ ಸಾಮಗ್ರಿಗಳ ಮೇಲೆ
ಜಿಎಸ್‍ಟಿ ವಿಧಿಸುವ ಶೈಕ್ಷಣಿಕ ವಿರೋಧಿ ಕ್ರಮಗಳನ್ನು ಸರ್ಕಾರಗಳು ನಿಲ್ಲಿಸಬೇಕು.

-ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು