ಆನೆದಾಳಿ: ಗಂಭೀರ ಗಾಯ

ಶಾರುಕ್‌ ಖಾನ್‌, ಹನೂರು
ಹನೂರು : ಆನೆ ದಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ಕೊಕ್ಕಬೋರೆ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.
೪೦ ವರ್ಷದ ಪುಟ್ಟಸ್ವಾಮಿ ಬಿನ್ ಬೊಮ್ಮಯ್ಯ ಗಾಯಗೊಂಡವನಾಗಿದ್ದು, ಈತನನ್ನು ಚಿಕಿತ್ಸೆಗಾಗಿ ರಾತ್ರಿಯೇ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ರವಾನಿಸಲಾಗಿದೆ.  
ಮಲೆ ಮಹದೇಶ್ವರ ಬೆಟ್ಟದಿಂದ ಕೊಕ್ಕಬೋರೆ ಗ್ರಾಮದಲ್ಲಿರುವ ತಮ್ಮ ಮನೆಗೆ
ತೆರಳುವಾಗ ರಾತ್ರಿ ಸುಮಾರು ೭ ಗಂಟೆಗೆ ಗ್ರಾಮದ ಸಮೀಪ ಆನೆ ದಾಳಿ ನಡೆಸಿದೆ ಎನ್ನಲಾಗಿದ್ದು, ಆನೆ ತುಳಿತದಿಂದ ವ್ಯಕ್ತಿಯ ಕಾಲು ಸಂಪೂರ್ಣ ಗಾಯಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು