ಅಕ್ರಮವಾಗಿ ರಕ್ತಚಂದನ ಸಾಗಾಟ : ಇಬ್ಬರ ಬಂಧನ ಮಾಲು ವಶ

ಕೊಳ್ಳೇಗಾಲ : ಅಕ್ರಮವಾಗಿ ರಕ್ತ ಚಂದನ ಮರವನ್ನು  ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ 103 ಕೆಜಿ ಮಾಲನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಟಗರಪುರ ಸಮೀಪ ನಡೆದಿದೆ. 
ಕೊಡಗು ಮೂಲದ ಸಮೀರ್ ಹಾಗೂ ಫೈರೋಜ್ ಬಂಧಿತರು. ಇವರು ಯಾವುದೇ ಪರವಾನಗಿ ಇಲ್ಲದೇ ರಕ್ತ ಚಂದನವನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ತಿಳಿದ  ಕೊಳ್ಳೇಗಾಲ ಅರಣ್ಯ ಸಂಚಾರಿ ದಳವು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಇಬ್ಬರನ್ನು ಬಂಧಿಸಿದೆ. 
ಅಲ್ಲದೇ ಒಂದು ಕಾರು, ಮೂರು ಮೊಬೈಲ್ ಫೋನುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದು  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು