ಜೈಲಿನಲ್ಲಿದ್ದ ಕಳ್ಳನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹೊರ ಬಿದ್ದ ಸತ್ಯ
ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ಚಿನ್ನದ ಅಂಗಡಿ ಮಾಲಿಕನ ಮನೆಗೆ ನುಗ್ಗಿ ಬಾಲಕನನ್ನು ಬೆದರಿಸಿ ಸುಮಾರು 307 ಗ್ರಾಂ ಚಿನ್ನಾಭರಣ ಮತ್ತು 2 ಲಕ್ಷ ರೂ. ನಗದು ಸುಲಿಗೆ ಮಾಡಿದ್ದ ಒಬ್ಬ ಖತರ್‍ನಾಕ್ ಕಳ್ಳನನ್ನು ಪೊಲೀಸರು ಜೈಲಿನಲ್ಲಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮಾಲು ಜಪ್ತಿ ಮಾಡಿದ್ದಾರೆ.
ಯುವಕನೊಬ್ಬ ಕಳೆದ ಜುಲೈ-2021 ರಿಂದ 2022ರ ನವೆಂಬರ್ ತನಕ ಯಾವುದೋ ಕಾರಣವಿಟ್ಟು ಮದ್ದೂರು ಟೌನ್‍ನ ಟೀಚರ್ ಕಾಲೋನಿಯಲ್ಲಿ ವಾಸವಿರುವ ಚಿನ್ನದ ಅಂಗಡಿ ಮಾಲಿಕನ ಮಗನನ್ನು ಹೆದರಿಸಿ
ಗ್ರಾಹಕರಿಂದ ಅಡವಿರಿಸಿಕೊಂಡಿದ್ದ ಚಿನ್ನದ ಒಡವೆಗಳ ಪ್ಯಾಕೆಟ್ ಪಡೆದುಕೊಂಡಿದ್ದನು ಎಂದು ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮದ್ದೂರು ಪೊಲೀಸರು ಆರೋಪಿಯು ಚನ್ನಪಟ್ಟಣ ತಾಲ್ಲೂಕಿನ ಮುದುಗೆರೆ ಗ್ರಾಮದವನು ಎಂದು ಪತ್ತೆ ಹಚ್ಚಿದ್ದರು. ಆದರೆ, ಈತ ಕೊಲೆ ಪ್ರಕರಣದಲ್ಲಿ ಆರೋಪಿತನಾಗಿ
ಜಿಲ್ಲಾ ಕಾರಗೃಹದಲ್ಲಿ ವಿಚಾರಣಾಧೀನ ಬಂಧಿಯಾಗಿದ್ದನು. ತಡ ಮಾಡದೆ ಪೊಲೀಸರು ನ್ಯಾಯಾಲಯದಿಂದ ಪೊಲೀಸ್
ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಯು ಚಿನ್ನ ಸುಲಿಗೆ ಮಾಡಿದ್ದು ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತ್ತೆ ತಂಡದಲ್ಲಿ ಮದ್ದೂರು ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಂತೋμï, ಪಿಎಸ್‍ಐ ನರೇಶ್ ಕುಮಾರ, ಆರ್.ಬಿ. ಉಮೇಶ, ಪಿ.ರವಿ, ಮತ್ತು ಸಿಬ್ಬಂದಿಗಳು ಇದ್ದರು.
0 ಕಾಮೆಂಟ್‌ಗಳು