ಬಿಸಲವಾಡಿ ಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಸಾವು: ಒಬ್ಬನ ಸ್ಥಿತಿ ಗಂಭೀರ
ಡಿಸೆಂಬರ್ 26, 2022
ಚಾಮರಾಜನಗರ:
ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿ
ಬಿಳಿಕಲ್ಲು ಕ್ವಾರಿ
ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಶಿವರಾಜು
ಹಾಗೂ ಕುಮಾರ್ ಮೃತ ದುರ್ದೈವಿಗಳು. ಸಿದ್ದರಾಜು
ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ರೇಣುಕಾದೇವಿ
ಎಂಬವರ ಹೆಸರಿನಲ್ಲಿ ಈ ಬಿಳಿಕಲ್ಲು ಕ್ವಾರಿಯ
ಪರವಾನಗಿ ಇದ್ದು ಅವರ ಪತಿ ಭಾಸ್ಕರ್
ಎಂಬವರು ಇದನ್ನು ನಡೆಸುತ್ತಿದ್ದರು. ಕಳೆದ ಫೆಬ್ರವರಿ ೪ ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದಲ್ಲಿ ೬ ಜನರು ಸಾವೀಗೀಡಾದ ಘಟನೆ ಮಾಸುವ ಮುನ್ನವೇ ಈ ದುರಂತ ನಡೆದಿದ್ದು,
ಗಣಿ ಸುರಕ್ಷತೆ ಬಗ್ಗೆ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಸ್ಥಳಕ್ಕೆ ಪೊಲೀಸರು
ಮತ್ತು ಗಣಿ ಅಧಿಕಾರಿಗಳು ದೌಡಾಯಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.
0 ಕಾಮೆಂಟ್‌ಗಳು