ಸಿಸಿಬಿ ದಾಳಿ: ಡ್ರಗ್ಸ್‌ ಮಾರುತ್ತಿದ್ದ ಕಾಲೇಜು ವಿದ್ಯಾರ್ಥಿ ಮತ್ತು ವಕೀಲನ ಬಂಧನ

ಮೈಸೂರು: ನಗರದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ನಗರದ ಕುವೆಂಪುನಗರ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ದಾಳಿ ನಡೆಸಿ ಡ್ರಗ್ಸ್‌ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ೩೧ ಗ್ರಾಂ ಡ್ರಗ್ಸ್‌ ಮತ್ತು ೫ ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳ ಪೈಕಿ 1ನೇ ಆರೋಪಿ ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ
ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, 2ನೇ ಆರೋಪಿ ವಕೀಲ ವೃತ್ತಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಡ್ರಗ್ಸ್‌ ಖರೀದಿ ಮತ್ತು ಮಾರಾಟದ ಬಗ್ಗೆ ತನಿಖೆ ನಡೆಯುತ್ತಿದ್ದು,
ಡಿಸಿಪಿ ಎಂ.ಎಸ್‌.ಗೀತಾ ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ  ಇನ್ಸ್‌ಪೆಕ್ಟರ್‌ ಎ.ಮಲ್ಲೇಶ್, ಪಿಎಸ್ಐ ಪ್ರತಿಭಾ ಜಂಗವಾಡ ಸಿಬ್ಬಂದಿಗಳಾದ ಅನಿಲ್ ಎಂ, ಸುಭಾನುಲ್ಲಾ ಬಾಲದಾರ, ಗಣೇಶ್, ಶ್ರೀನಿವಾಸ್ ಪ್ರಸಾದ್, ಜೋಸೆಫ್ ನರ್ಹೋನಾ, ರಾಧೇಶ್, ಶ್ರೀನಿವಾಸ್, ಅರುಣ್ ಕುಮಾರ್, ಮಮತ  ರವರು ದಾಳಿಯಲ್ಲಿ ಭಾಗವಹಿಸಿದ್ದರು.
 ಪತ್ತೆ ಕಾರ್ಯವನ್ನು ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ಶ್ಲಾಘಿಸಿದ್ದಾರೆ
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು