ಸಿಎಂ ಭೇಟಿಗೆ ಅವಕಾಶ ಕೊಡದಿದ್ರೆ ಕಪ್ಪು ಬಾವುಟ ಪ್ರದರ್ಶನ : ರಾಮಾಪುರ ರಾಜೇಂದ್ರ

 -ಶಾರುಕ್ ಖಾನ್, ಹನೂರು
ಹನೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ರೈತರ ಸಮಸ್ಯೆ ಕುರಿತು ಅವರಿಗೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ, ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ, ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ರಾಮಾಪುರ ರಾಜೇಂದ್ರ ಹೇಳಿದರು.
ಹನೂರು ತಾಲ್ಲೂಕು ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾ ಡಿದ ಅವರು, ಯಾ ವುದೇ ಸರ್ಕಾರ ಆಡಳಿತಕ್ಕೆ ಬಂದರೂ ರೈತರಿಗೆ ಪ್ರಯೋಜವಾಗುತ್ತಿಲ್ಲ. ಎಲ್ಲವೂ ಕಮೀಷನ್ ದಂಧೆಯ ಸರ್ಕಾರಗಳು. ದೇಶಕ್ಕೆ ಆಹಾರ ಭದ್ರತೆ ಒದಗಿಸುವ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಯಾ ವುದೇ ಸವಲತ್ತುಗಳು ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರಿಗೆ ಇಪ್ಪತ್ತು ಪರ್ಸೆಂಟ್ ನಷ್ಟವಾಗುತ್ತಿದೆ. ರೈತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಡಿ.19 ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆಗೆ ಜಿಲ್ಲೆಯಿಂದಲೂ ರೈತರು ತೆರಳಲಿದ್ದಾರೆ ಎಂದರು.
ಜಾತಿಗೊಂದು ನಿಗಮ ಮಾಡುವ ಸರ್ಕಾರ ಕಬ್ಬಿಗೆ ಸೂಕ್ತ ಬೆಲೆ ನೀಡುತ್ತಿಲ್ಲ. ಹಾಲಿನ ಬೆಲೆಯೂ ಹೆಚ್ಚಿಸಬೇಕು. ರೈತ ತನ್ನ ಉತ್ಪನ್ನಗಳನ್ನು ತಯಾರು ಮಾಡಲು ಪಡುವ ಕ್ಷದ ಬಗ್ಗೆ ಸರ್ವೆ ಮಾಡಿಸಿ ಆಗ ನಿಮಗೆ ರೈತರ ಕಷ್ಟ ತಿಳಿಯುತ್ತದೆ ಎಂದರು.
ಮುಖಂಡರಾದ ಹರೀಶ್, ಬೋಸ್ಕೊ, ಸದಾನಂದ, ಬಸವರಾಜು, ಮಹೇಶ ಇನ್ನಿತರರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು