ಮಾಜಿ ಸಿಎಂ ಎಚ್‍ಡಿಕೆ `ಅಸ್ಪøಶ್ಯತೆ’ ಹೇಳಿಕೆ ಖಂಡಿಸಿ ಪ್ರತಿಭಟನೆ
ಡಿಸೆಂಬರ್ 04, 2022
ಹನೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ `ಅಸ್ಪøಶ್ಯತೆ’ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ಬಳಿಕ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನಿಶಾಂತ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಇಬ್ರಾಹಿಂ ರವರಿಗೆ ಸಿಎಂ ಪಟ್ಟ ಕೊಡುವುದರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಅವರೇನು ಅಸ್ಪøಶ್ಯರಲ್ಲ ಎಂದು ಹೇಳಿರುವುದು ಸಂವಿಧಾನ ವಿರೋಧಿಯಾಗಿದೆ ಇದು ಖಂಡನೀಯ ಎಂದರು. ಕೂಡಲೇ ಎಚ್‍ಡಿಕೆ ರಾಜ್ಯದ ಜನತೆಯ ಬಳಿ ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು. ಕಿರಣ್, ಚೇತನ್, ಸಿದ್ದಪ್ಪಾಜಿ ನಾಯಕ, ಬಸವರಾಜು, ರಂಗೇಗೌಡ, ತೇಜು, ಜಗದೀಶ್, ರುದ್ರ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು