ಚಿನಕುರಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‍ಎಸ್‍ಎಸ್, ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆದ ಗಿಡ ನೆಡುವ ಕಾರ್ಯಕ್ರಮ

ಪಾಂಡವಪುರ : ತಾಲ್ಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮತ್ತು  ಗ್ರಾಮಪಂಚಾಯತಿ ಸಹಯೋಗದ ವತಿಯಿಂದ ಇಂದು ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಚಿನಕುರಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಾಪಣ್ಣ, ಚಿನಕುರಳಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ತಾಲೂಕು ಪಂಚಾಯತಿ ಮಾಜಿ ಸದಸ್ಯ  ಸಿ.ಎಸ್. ಗೋಪಾಲ್ ಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಪರಮೇಶ್, ಕೃಷ್ಣೇಗೌಡ, ಲೋಕೇಶ್, ಶಾಲಾಭಿವೃದ್ಧಿ ಸದಸ್ಯರಾದ ಪ್ರಕಾಶ್, ಮಹದೇವ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೊಗಣ್ಣಗೌಡ, ಸದಸ್ಯ ಮಂಜುನಾಥ, ಊರಿನ ಮುಖಂಡರಾದ ಲೋಕೇಶ್, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಭಾರ ಪ್ರಾಂಶುಪಾಲ  ಮಂಜುನಾಥ ಚಿನಕುರಳಿ, ಉಪ ಪ್ರಾಂಶುಪಾಲರಾದ ಜಯಶ್ರೀ, ಮುಖ್ಯೋಪಾಧ್ಯಾಯ ಮಹದೇವಪ್ಪ, ಉಪನ್ಯಾಸಕರಾದ ದಿನೇಶ್, ಲತಾ, ವಿನಾಯಕ್, ಸುಬ್ಬನರಸಿಂಹ, ಸಾರಾ ಮನೋಹರ, ಮಹೇಶ್, ಪ್ರಶಾಂತ್, ಜಗದೀಶ್, ಸೌಮ್ಯ ಹಾಗೂ ವಿದ್ಯಾರ್ಥಿಗಳಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು