ಆನೆದಂತ ಮಾರಾಟಕ್ಕೆ ಯತ್ನ: ಐವರ ಬಂಧನ, ಕಾರು ವಶ

ಗುಂಡ್ಲುಪೇಟೆ : ಆನೆದಂತಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ಆನೆದಂತಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಪಡಿಸಿಕೊಂಡ ಘಟನೆ ತಾಲೂಕಿನ ಬಸವನಪುರ ಬಳಿ ನಡೆದಿದೆ.
ತಮಿಳುನಾಡು ಮೂಲದ ರಂಗಸ್ವಾಮಿ(35), ಸಂಜೀವಕುಮರ್, ಎನ್.ವಿನೋತ್(36), ಕದಿರೇಸನ್(45), ಸೆಲ್ವ ನಾಯಗಂ(44) ಬಂಧಿತ ಆರೋಪಿಗಳು.
ಇವರ ಬಳಿಯಿದ್ದ ಟಿ.ಎನ್.43 ಕೆ 9367 ಹೊಂಡಾಯ್ ಐ 20 ಕಾರು ವಶಕ್ಕೆ ಪಡೆಯಲಾಗಿದೆ.
 ಘಟನೆ ವಿವರ : ಬಂಡೀಪುರ ಬಫರ್ ಝೋನ್ ವಲಯ ವ್ಯಾಪ್ತಿಯ ಬಸವನಪುರ ಗ್ರಾಮದ ಒಂಟೆ ಫಾರಂ ಬಳಿ ಎರಡು ಆನೆದಂತ ಅಕ್ರಮ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.
 ಬಸವನಪುರ ಒಂಟೆ ಫಾರಂ ಬಳಿ ಟಿಎನ್ 37 ಕೆ 9367 ಕಾರಿನ ಬಳಿ ಅನುಮಾಸ್ಪದವಾಗಿ ಮೂರು ಆಸಾಮಿಗಳು ನಿಂತಿದ್ದದನ್ನು ಕಂಡು ಪರಿಶೀಲನೆ ನಡೆಸಿದಾಗ ಕಾರಲ್ಲಿ ಎರಡು ಆನೆದಂತ ಸಿಕ್ಕಿವೆ. ಸ್ಥಳದಲ್ಲಿದ್ದ ಮೂರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಿಬ್ಬರ ಆರೋಪಿಗಳು ಇದ್ದರು ಎಂದು ಆರೋಪಿಗಳು ಹೇಳಿದ್ದಾರೆ.
 ನಂತರ ತಮಿಳುನಾಡಿ ಮಸನಿಗುಡಿ ಹಾಗು ಗುಂಡ್ಲುಪೇಟೆ ಬಸ್ ನಿಲ್ದಾಣದ ಬಳಿ ಬಂಧಿಸಿದ ಬಳಿಕ ಐವರು ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಈ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಕ್ಕೆ ಪಡೆದು ಅರಣ್ಯ ಕೇಸು ದಾಖಲಿಸಲಾಗಿದೆ.
 ಬಂಧಿತರ ಐವರನ್ನು ಗುಂಡ್ಲುಪೇಟೆ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನಂತರ ಚಾಮರಾಜನಗರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಪ್ರಭಾರ ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್‍ಕುಮಾರ್ ಹಾಗು ಉಪ ವಲಯ ಅರಣ್ಯಾಧಿಕಾರಿಗಳಾದ ಮುದ್ದುರಾಜು, ಭರತ್ ಜಿ.ಪಿ.ಕಿರಣ್‍ಕುಮಾರ್ ಬಿ.ಎಸ್.,ರಮೇಶ ಮಠಪತಿ, ಶ್ರೀಪಾಲ್ ಕೆ.,ಶಿವಕುಮಾರ್ ಬಿ.ಎಸ್.,ಪ್ರವೀಣ್‍ಕುಮಾರ್, ಸಿದ್ದು ಅರಿ, ಅರಣ್ಯ ರಕ್ಷಕರಾದ ನಾಗೇಂದ್ರ, ನಾಗೇಶ್, ಕುಮಾರ್, ಅಭಿಲಾμï ಡಿ., ಶೇಖರ್ ರಾಮಪ್ಪ ಜಾಧವ, ಪರಸಪ್ಪ ಹೆಚ್ ಮಾದರ, ಅರಣ್ಯ ವೀಕ್ಷಕ ಶಂಕರ, ಶ್ರೀಕಾಂತ್, ಚಾಲಕರಾದ ಅಬ್ದುಲ್ ಹನೀಫ್, ರಾಘವೇಂದ್ರ, ಸುರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು