ಪತ್ರಕರ್ತನ ಮೇಲೆ ಜೆಡಿಎಸ್‌, ಕಾಂಗ್ರೆಸ್‌ ಪುರಸಭೆ ಸದಸ್ಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಸ್ಥಳೀಯ ಸುದ್ದಿ ವಾಹಿನಿ ವರದಿಗಾರ ನಾಗರಾಜು ಎಂಬವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಬನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕೆಲಸ ಮಾಡುವಾಗ ಕುಡಿಯುವ ನೀರಿಗೆ ಚರಂಡಿ ನೀರು ಬೆರತು ಹೋಗುತ್ತಿರು ಬಗ್ಗೆ ನಾಗರಾಜು ಈ ಹಿಂದೆ ವರದಿ ಮಾಡಿದ್ದರು.
ಇಂದು ಪುರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ವರದಿ ಮಾಡಲು ಸಭಾಂಗಣಕ್ಕೆ ಹೋಗುವಾಗ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಪುರಸಭೆ ಸದಸ್ಯರುಗಳು ನಾಗರಾಜು ಅವರನ್ನು ತಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಧ್ಯ ನಾಗರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಂಡನೆ : ಪತ್ರಕರ್ತ ನಾಗರಾಜು ಮೇಲಿನ ಹಲ್ಲೆಯನ್ನು ರೈತ ಸಂಘದ ಜಿಲ್ಲಾದ್ಯಕ್ಷ ಬನ್ನೂರು ನಾರಾಯಣ್ ಖಂಡಿಸಿದ್ದಾರೆ. ಪತ್ರಕರ್ತರ ಬಗ್ಗೆ ಹಗುರವಾಗಿ ನಡೆದುಕೊಳ್ಳಬಾರದು. ಅವರ ವರದಿಯನ್ನು ಗೌರವಿಸಬೇಕು. ಹಲ್ಲೆ, ದೌರ್ಜನ್ಯ ಸರಿಯಾದ ಕ್ರಮವಲ್ಲ
ಎಂದು ಹೇಳಿದ್ದಾರೆ.