ನಾನು ವೀರಪ್ಪನ್‌ನನ್ನು
ನೋಡಿಯೇ ಇಲ್ಲ ನಾನು ವೀರಪ್ಪನ್‌ನನ್ನು
ನೋಡಿಯೇ ಇಲ್ಲ ,ನನಗೂ ವೀರಪ್ಪನಗೂ ಸಂಬಂಧವಿಲ್ಲ
ಎಂದು ಜ್ಞಾನಪ್ರಕಾಶ್ ಹೇಳಿದ್ದಾರೆ . ನಾನು ಪಾಲಾರ್ ಬಾಂಬ್
ಸ್ಫೋಟದಲ್ಲಿ ಭಾಗಿಯಾಗಿದ್ದೆ ಎಂದು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರು. ಆ ಸ್ಪೋಟಕ್ಕೂ ನನಗೂ
ಸಂಬಂಧವೇ ಇಲ್ಲ. ೩೪ ವರ್ಷದವನಿದ್ದಾಗ ನಾನು ಜೈಲುಪಾಲಾದೆ. ೩೦ ವರ್ಷ ಜೈಲು ಶಿಕ್ಷೆ ಅನುಭವಿಸಿದೆ.
ನನಗೀಗ ೬೪ ವರ್ಷ. ನನಗೆ ತುಂಬಾ ಅನ್ಯಾಯವಾಗಿ ಹೋಯಿತು. ನಾನು ವೀರಪ್ಪನ್‌ನನ್ನು ನೋಡಿಯೇ ಇಲ್ಲ.
ಆದರೆ ಬಡವನಾದ ನನ್ನ ಬಳಿ ಹಣವಿಲ್ಲದೆ ಇದ್ದುದರಿಂದ ನ್ಯಾಯ ಸಿಗಲಿಲ್ಲ. ಹಣವಿಲ್ಲದವನಿಗೆ ನ್ಯಾಯ
ಸಿಗುವುದಿಲ್ಲ ಎಂಬ ಮಾತು ನನ್ನ ಪಾಲಿಗೆ ನಿಜವಾಯಿತು ಎಂದು ಜ್ಞಾನಪ್ರಕಾಶ್ ಹೇಳಿದ್ದಾರೆ. ಹನೂರಿನ ಎಚ್.ನಾಗಪ್ಪ
ಮತ್ತು ಜಿ.ರಾಜೂಗೌಡ ಅವರ ನಡುವೆ ನಡೆಯುತ್ತಿದ್ದ ರಾಜಕೀಯ ಜಿದ್ದಾಜಿದ್ದಿಯಲ್ಲಿ ವೀರಪ್ಪನ್
ಹೆಸರು ಬಳಸಿಕೊಂಡು ವೋಟ್ ಪಡೆಯಲು ಇಬ್ಬರೂ ಹವಣಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜಕೀಯ
ಲಾಭಕ್ಕಾಗಿ ಪಾಲಾರ್ ಬಾಂಬ್ ಸ್ಫೋಟ ಪ್ರಕರಣವನ್ನು ಬಳಸಿಕೊಂಡರು. ಅಮಾಯಕರಾದ ನಾನೂ ಸೇರಿದಂತೆ
ಹಲವರನ್ನು ಬಂಧಿಸಿ ಜೈಲಿಗೆ ಹಾಕಿದರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್
ನಮಗೆ ಜಾಮೀನು ಸಿಗದಿರಲಿ ಎಂಬ ಕಾರಣಕ್ಕೆ ಟಾಡಾ ಕೇಸ್ ಹಾಕಿಸಿದ್ದರು. ಹೀಗೆ ರಾಜಕಾರಣಿಗಳು ನಮಗೆ
ಮೋಸ ಮಾಡಿದರು ಎಂಬುದು ಜ್ಞಾನಪ್ರಕಾಶ್ ಸ್ಪಷ್ಟೀಕರಣ.
0 ಕಾಮೆಂಟ್‌ಗಳು