ಕಾಡುಕೊತ್ತನಹಳ್ಳಿ ಶ್ರೀ ವೀರಭದ್ರಶ್ವೇರ ಸ್ವಾಮಿ ಸಮುದಾಯದ ಭವನ ಉದ್ಘಾಟನೆ
ನವೆಂಬರ್ 18, 2022
-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೂಕಿನ ಕಾಡು ಕೋತ್ತನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರಶ್ವೇರ ಸ್ವಾಮಿ ಸಮುದಾಯ ಭವನವನ್ನು ಸಂಸದೆ ಸುಮಲತಾ ಅಂಬರೀಶ್ ಅವರು ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಸಂಸದರ ನಿಧಿಯ ಅನುದಾನಗಳ ಮೂಲಕ ಹಲವಾರು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ ಕೀರ್ತಿ ಅಂಬರೀಶ್ ರವರಿಗೆ ಸಲ್ಲುತ್ತದೆ. ಒಬ್ಬ ಸಂಸದರಿಗೆ 4 ಕೋಟಿ ಅನುದಾನ ನೀಡುತ್ತಾರೆ ಅದರಲ್ಲಿ 2 ಕೋಟಿಗೂ ಹೆಚ್ಚುಹಣವನ್ನು ಸಮುದಾಯ ಭವನಗಳ ನಿರ್ಮಾಣಕ್ಕೆ ನೀಡಲಾಗಿದೆ. ಈ ಭವನಕ್ಕೂ 10 ಲಕ್ಷ ನೀಡಿದ್ದೇನೆ ಎಂದರು.
ನಂತರ ಸಮುದಾಯ ಭವನದ ಅಡುಗೆ ಮನೆ ಹಾಗೂ ಊಟದ ಮನೆಯನ್ನು ಸಮಾಜ ಸೇವಕ ಕದಲೂರು ಉದಯ್ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನಗಳು ಅತ್ಯಾವಶ್ಯಕ ದಿ.ಅಂಬರೀಶ್ ರವರು ಉದಾರ ಮನಸ್ಸಿನಿಂದ ನಿಸ್ವಾರ್ಥ ಸೇವಾ ಮನೋಭಾವದಿಂದ ಜಿಲ್ಲೆಗೆ ಹಾಗೂ ಮದ್ದೂರು ತಾಲೂಕಿನಲ್ಲಿ ಹಲವಾರು ಸಮುದಾಯ ಭವನಗಳನ್ನು ನಿರ್ಮಿಸಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವು ಸಾಗಬೇಕು. ಜತೆಗೆ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಸದೆ ಸುಮಲತಾ ಅಂಬರೀಶ್ ಅವರ ಕೈ ಬಲಪಡಿಸಬೇಕು ಎಂದರು. ಸಮಾಜ ಸೇವಕಿ ಪ್ರೇಮಾ ಯುವರಾಜ್, ಗ್ರಾಪಂ ಅಧ್ಯಕ್ಷರಾದ ದಯಾನಂದ, ಜಿಪಂ ಮಾಜಿ ಸದಸ್ಯ ಅಣ್ಣುರು ರಾಜೀವ್, ಎ.ಟಿ. ಬಲ್ಲೆಗೌಡ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಸವರಾಜು, ಕೀರಣಗೆರೆ ಜಗದೀಶ್, ಜಿಪಂ ಮಾಜಿ ಸದಸ್ಯ ವಿವೇಕಾನಂದ, ಬೋರೇಗೌಡ, ದಾಸೆಗೌಡ, ಚಿಂದಂಬರ ಮೂರ್ತಿ, ಕೆ.ಮಹದೇವು ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು