ಮಲೆ ಮಹದೇಶ್ವರ ಹುಲಿ ಸಂರಕ್ಷಣಾ ಪ್ರದೇಶ ಘೋಷಣೆಗೆ ಶಾಸಕ ಆರ್.ನರೇಂದ್ರ ವಿರೋಧ : 12 ಹುಲಿಗಳಿಗೋಸ್ಕರ 20 ಸಾವಿರ ನನ್ನ ಜನರಿಗೆ ತೊಂದರೆ ಕೊಡುವುದು ಇಷ್ಟವಿಲ್ಲ ಎಂದ ಶಾಸಕ
ನವೆಂಬರ್ 18, 2022
-ಶಾರುಕ್ ಖಾನ್, ಹನೂರು
ಹನೂರು : ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಣಾ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬಾರದು ಇದಕ್ಕೆ ನನ್ನ ವಿರೋಧವಿದೆ ಎಂದು ಹನೂರು ಶಾಸಕ ಆರ್.ನರೇಂದ್ರ ಹೇಳಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, 12 ಹುಲಿಗೋಸ್ಕರ 20 ಸಾವಿರ ಜನರಿಗೆ ತೊಂದರೆ ಕೊಡಬೇಕಾ? ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ಇಲ್ಲಿರುವ ಹುಲಿಗಳನ್ನೇ ಬೇರೆ ಕಡೆ ಶಿಫ್ಟ್ ಮಾಡಿ, ಬಂಡಿಪುರ ಅರಣ್ಯಕ್ಕೂ ಹುಲಿಗಳನ್ನು ಕಳಿಸಬಹುದು. ನಮ್ಮ ಜನರು ಕಾಡಿನಲ್ಲಿ ಸಿಗುವ ಕಿರು ಅರಣ್ಯ ಉತ್ಪನ್ನಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಜತೆಗೆ ಅರಣ್ಯಾಧಾರಿತ ಕಸುಬು ನಡೆಸಿ ಜೀವನ ಮಾಡುವ ಸಾವಿರಾರು ಬುಡಕಟ್ಟು ಜನರಿಗೆ ತೊಂದರೆಯಾಗುವುದು ಬೇಡ. ಇದನ್ನು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡೋದ್ರಿಂದ ಸ್ಥಳೀಯ ಜನರಿಗೆ ತೊಂದರೆ ಮಾಡಿದಂತಾಗುತ್ತದೆ ಎಂದು ಕಿಡಿ ಕಾರಿದರು. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದಲ್ಲಿ ಕಠಿಣ ಕಾನೂನು ಕ್ರಮಗಳಿಂದ ಇಲ್ಲಿನ ಬುಡಕಟ್ಟು, ಬೇಡ ಗಂಪಣ ಜನರಿಗೆ ಮೂಲಭೌತ ಸೌಕರ್ಯ ಸಿಗೋದಿಲ್ಲ. ಪ್ರತಿವರ್ಷ ಬೆಟ್ಟಕ್ಕೆ ಎಲ್ಲಾ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಾರೆ. ದೇವರ ದರ್ಶನಕ್ಕೆ ಹೋಗುವರೆಗೂ ನಾನಾ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
0 ಕಾಮೆಂಟ್‌ಗಳು