ಆಯುರ್ವೇದ ಚಿಕಿತ್ಸೆಯಿಂದಲೂ ಕ್ಯಾನ್ಸರ್ ಗುಣಪಡಿಸಬಹುದು : ಡಾ.ದಯಾನಂದ
ನವೆಂಬರ್ 07, 2022
ಮೈಸೂರು : ಮುಂಜಾಗ್ರತಾ ತಪಾಸಣೆ ಮತ್ತು ಅಗತ್ಯವಾದ ಚಿಕಿತ್ಸೆ ಪಡೆಯುವ ಮೂಲಕ ಆಯುರ್ವೇದ ಔಷಧಿಗಳಿಂದಲೂ ಕ್ಯಾನ್ಸರ್ ರೋಗ ಗುಣಪಡಿಸಬಹುದು ಎಂದು ಡಾ.ಆರ್.ಡಿ.ದಯಾನಂದ ಹೇಳಿದರು. ನಗರದ ಜಯಲಕ್ಷ್ಮಿಪುರಂ ಬಿ.ಎಂ.ಆಸ್ಪತ್ರೆ ಪಕ್ಕದಲ್ಲಿರುವ ಅಥರ್ವ ಮಲ್ಟಿ ಸ್ಪೆಷಾಲಿಟಿ ಆಯುರ್ವೇದಿಕ್ ಮತ್ತು ಹೀಲಿಂಗ್ ಸೆಂಟರ್‍ನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಪ್ರಯುಕ್ತ ಏರ್ಪಡಿಸಿದ್ದ ಕ್ಯಾನ್ಸರ್ ಜಾಗೃತಿ ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಸೂಕ್ತ ವ್ಯಾಯಾಮ, ಪಥ್ಯಾಹಾರವಿಲ್ಲದೇ ಯಾಂತ್ರಿಕ ಬದುಕಿನಿಂದ ಹಲವಾರು ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ನಿಗದಿತವಾಗಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವುದು. ಸಾಧ್ಯವಾದಷ್ಟು ವ್ಯಾಯಾಮ, ಉತ್ತಮ ಆಹಾರಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಮತ್ತು ರಾತ್ರಿ ವೇಳೆ ನಿದ್ದೆ ಮಾಡುವುದರಿಂದ ನಾವು ರೋಗಮುಕ್ತರಾಗಬಹುದು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಸಭಿಕರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಆಸ್ಪತ್ರೆ ಮುಖ್ಯಸ್ಥ ನಾಗೇಶ್ ಮಾತನಾಡಿ, ರೋಗ ಬರುವುದಕ್ಕೂ ಮುಂಚೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಈ ನಿಟ್ಟಿನಲ್ಲಿ ಇಂದಿನ ಶಿಬಿರ ಅತ್ಯಂತ ಉಪಯಕ್ತವಾಗಿದೆ. ಆಹಾರಗಳನ್ನು ಊಟವಾಗಿ ತೆಗೆದುಕೊಳ್ಳುವುದಕ್ಕಿಂದ ಅದೂ ಕೂಡ ಔಷಧಿ ಎಂಬಂತೆ ತೆಗೆದುಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಆಯುರ್ವೇದ ಚಿಕಿತ್ಸೆ ಇಂದು ಅತ್ಯಂತ ಜನಪ್ರಿಯವಾಗಿದೆ. ಅತ್ಯುತ್ತಮ ವೈದ್ಯರೂ ನಮ್ಮಲ್ಲಿದ್ದಾರೆ. ಸಾರ್ವಜನಿಕರು ಬಳಸಿಕೊಳ್ಳುವುದು ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಹಲವಾರು ಜನರಿಗೆ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಯಿತು. ಡಾ.ಪುಷ್ಪಾ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಬಿಲಾಲ್ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು