ಸರ್ಕಾರಿ ಸವಲತ್ತುಗಳನ್ನು ಜನರಿಗೆ ತಲುಪಿಸುವುದೇ ಕಂದಾಯ ಇಲಾಖೆ ಕೆಲಸ : ತಹಶಿಲ್ದಾರ್ ಆನಂದಯ್ಯ


 -ಶಾರುಕ್ ಖಾನ್, ಹನೂರು 

ಹನೂರು : ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದೇ ಕಂದಾಯ ಇಲಾಖೆ ಕೆಲಸ ಎಂದು ತಹಶಿಲ್ದಾರ್ ಆನಂದಯ್ಯ ತಿಳಿಸಿದರು. 
ಪಟ್ಣಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರದ ಸಹಯೋಗದೊಂದಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸವಲತ್ತುಗಳನ್ನು ವಿತರಿಸುವ ಮತ್ತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು, ವೃದ್ಧಾಪ್ಯ ವೇತನ, ಜನನ ಮರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬೆಳೆಸಾಲ ತಿರುವಳಿ ಪತ್ರ, ಮನಸ್ವಿನಿ ಯೋಜನೆ, ವಿಕಲಚೇತನರು ಮತ್ತು ರೈತರ ಯೋಜನೆಗಳಿಗೆ ಸಂಭಂದಿಸಿದ ವಿವಿಧ ದಾಖಲೆಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 
ಈ ಸಂದರ್ಭದಲ್ಲಿ ಹಲವು ಫಲಾನುಭವಿಗಳಿಗೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ  ಚಂದ್ರಮ್ಮ, ಉಪಾಧ್ಯಕ್ಷರಾದ ಗಿರೀಶ್, ಸದಸ್ಯರುಗಳಾದ ಸಂಪತ್ ಕುಮಾರ್, ಹರೀಶ್ ಕುಮಾರ್, ಆನಂದ, ಮಹೇಶ್, ಮುಮ್ತಾಜ್ ಭಾನು, ರಾಜಸ್ವ ನಿರೀಕ್ಷಕರಾದ ಮಹಾದೇವಸ್ವಾಮಿ, ಶಿರಸ್ತೇದಾರ್ ನಾಗೇಂದ್ರ ಮುಂತಾದವರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು