ಹನೂರು : ತಾಲ್ಲೂಕಿನ ಎಲ್ಲೆಮಾಳ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು ರೈತರೊಬ್ಬರು ತಮ್ಮ ಸ್ವಂತ ಜಮೀನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಹನೂರು ತಾಲ್ಲೂಕು ಕೆಂಚಯ್ಯನದೊಡ್ಡಿ ಗ್ರಾಮದ ಸಿದ್ದಪ್ಪ ಮತ್ತು ಅವರ ಪತ್ನಿ ಜಯಮ್ಮ ಅವರೇ ಆಸ್ಪತ್ರೆಗೆ ಜಮೀನು ದಾನ ಮಾ ಡಿದವರಾಗಿದ್ದು, ಎಲ್ಲೇಮಾಳ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಕಟ್ಟಡ ನಿರ್ಮಿಸಲು ತಮ್ಮ ಸ್ವಂತ ಜಮೀನಿನಲ್ಲಿ 2400 ಚದರಡಿ ಜಾಗವನ್ನು ಸರ್ಕಾರಕ್ಕೆ ದಾನ ಮಾಡಿದ್ದು, ದಾನಿಗಳ ಕೋರಿಕೆ ಮೇರೆಗೆ ಆರೋಗ್ಯ ಕೇಂದ್ರಕ್ಕೆ ಶ್ರೀಮತಿ ಜಯಮ್ಮ ಸಿದ್ದಪ್ಪ ಆರೋಗ್ಯ ಉಪ ಕೇಂದ್ರ ಎಂದು ಹೆಸರಿಡಲು ಸಹ ಆರೋಗ್ಯ ಇಲಾಖೆಯ ಅಧಿಕಾರಿಗಳು ಒಪ್ಪಿದ್ದಾರೆ. ಸಿದ್ದಪ್ಪ ದಂಪತಿಗಳ ಈ ಕಾರ್ಯವನ್ನು ಗ್ರಾಮಸ್ಥರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು