ನಮ್ಮ ನೆಲ, ಜಲ, ಭಾಷೆಯ ರಕ್ಷಣೆಯಲ್ಲಿ ಕನ್ನಡಿಗರು ಮೈ ಮರೆಯಬಾರದು : ಮಲ್ಲಿಕಾರ್ಜುನಸ್ವಾಮಿ
ಮೈಸೂರು : ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಮೈ ಮರೆಯಬಾರದು. ಅನ್ಯ ಭಾಷಿಕರು ಎಲ್ಲವನ್ನೂ ಆಕ್ರಮಿಸಿಕೊಳ್ಳುವ ಅಪಾಯವೇ ಹೆಚ್ಚು ಎಂದು ಕನ್ನಡ ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಎಂ.ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ನಗರದ ಹಂಚ್ಯಾ-ಸಾತಗಳ್ಳಿ ಬಿ. ವಲಯದಲ್ಲಿ ಹಂಸವಾಣಿ ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿ ಹಾಗೂ ಹಂಸವಾಣಿ ಕನ್ನಡ ಬಳಗದವರು ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಎರಡೂ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎಲ್ಲರಲ್ಲೂ ಕನ್ನಡಾಭಿಮಾನ ಇದ್ದೇ ಇದೆ. ಆದರೆ, ಅದನ್ನು ಹೆಚ್ಚಿಸಿಕೊಳ್ಳಬೇಕು. ನಾವು ಹುಟ್ಟಿದಾಗ ಈ ನಾಡು ಹೇಗಿತ್ತೋ ನಾವು ಸಾಯುವ ಮುನ್ನ ಅದನ್ನು ಮತ್ತಷ್ಟು ಸುಂದರಗೊಳಿಸೋಣ ಎಂಬ ಕವಿಗಳ ನಾಣ್ಣುಡಿಯನ್ನು ಪಾಲಿಸುತ್ತಾ ಕನ್ನಡ ಆಡುಬಾಷೆಯಾಗಬೇಕು. ಆಳುವ ಭಾಷೆಯೂ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಸ್.ಮಂಜೇಗೌಡ ಮಾತನಾಡಿ, ಕನ್ನಡ ಭಾಷೆಯ ಬಳಕೆ, ರಕ್ಷಣೆ ಮತ್ತು ಅದನ್ನು ಕನ್ನಡ ಬಾರದಿರುವ ಜನರಿಗೆ ಕಲಿಸುವ ವಿಧಾನ ಕುರಿತು ಸವಿಸ್ತಾರವಾಗಿ ತಿಳಿವಳಿಕೆ ಹೇಳಿದರು.
ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಹಾಕಾವ್ಯಗಳು ಬಂದಂತಹ ಕಾಲದಲ್ಲಿ ಇಂಗ್ಲೀಷ್ ಭಾಷೆ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಆದರೆ, ಇಂಗ್ಲಿಷ್ ಭಾಷಿಕರ ಭಾಷಾಭಿಮಾನದಿಂದ ಇಂದು ಆ ಭಾಷೆ ಜಗತ್ತನ್ನೇ ಆಳುತ್ತಿದೆ. ಕನ್ನಡಿಗರು ಇಂತಹ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಡಾವಣೆಯ ಮಹಿಳೆಯರು ಡಿ.ಎಸ್.ಕರ್ಕಿ ರಚಿಸಿರುವ `ಹಚ್ಚೇವು ಕನ್ನಡದ ದೀಪ’ ಭಾವಗೀತೆಯನ್ನು ಹಾಡಿ ಸಭಿಕರ ಗಮನ ಸೆಳೆದರು.
ಬಡಾವಣೆಯ ಯುವಕರು, ಮಕ್ಕಳಿಗಾಗಿ ಏರ್ಪಡಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ, ಭಾಗವಹಿಸಿದವರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಆಹ್ವಾನಿತರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಮಾದೇಗೌಡ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಹಂಚ್ಯಾ ಸಾತಗಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಟಿಆರ್ ಮಂಜು,
ಹಂಸವಾಣಿ ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ.ಕಾಂತರಾಜು, ಉಪಾಧ್ಯಕ್ಷರಾದ ಎಲ್.ಕೃಷ್ಣರಂಗರಾಜು, ಪ್ರಧಾನ ಕಾರ್ಯದರ್ಶಿ ಟಿ.ನಟರಾಜು, ಖಜಾಂಚಿ ನಾಗಸುಂದರ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕರಾದ ಓ.ಇ.ತಮ್ಮಯ್ಯ, ಕೆ.ಎಂ.ಸೋಮಣ್ಣ, ಬಿ.ಸಿ.ಸಿದ್ದರಾಜು, ದೊಡ್ಡ ಮರೀಗೌಡ, ಕೆ.ಎಂ.ಸಾವನ್, ಎನ್.ಸೋಮಶೇಖರ್, ಆರ್.ಪರಮೇಶ್ವರಪ್ಪ, ಎಸ್.ಲಿಂಗಯ್ಯ, ಹೆಚ್.ಎಸ್.ರಾಚಯ್ಯ, ಹಂಸವಾಣಿ ಕನ್ನಡ ಬಳಗದ ಅಧ್ಯಕ್ಷ ಕೆ.ಸಿ.ಪ್ರಶಾಂತ್, ಉಪಾಧ್ಯಕ್ಷ ಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ರಾಘವೇಂದ್ರ ಭಟ್, ಖಜಾಂಚಿ ಎಂ.ಪ್ರವೀಣ್ ಲಾಡ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಸಹ ಕಾರ್ಯದರ್ಶಿ ಅರುಣ್ ಕುಮಾರ್, ನಿರ್ದೇಶಕರಾದ ಮಹದೇವ, ನಿತೀನ್, ವಿಕ್ಟರ್ ವಿಜಯ, ಪುನೀತ್, ಹೊಟ್ಟೆಂಗಡ ಸುಗುಣ, ಕೆ.ಪದ್ಮನಾಭ್, ಎನ್.ಗಿರಿ ಮಂಜೇಶ್ ರಾಘವ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು