ತೊಣ್ಣುರು ಕೆರೆ ಏರಿ ವಿಚಾರ ; ರಾಜಕೀಯ ದುರುದ್ಧೇಶದಿಂದ ಅಪಪ್ರಚಾರ : ಪುಟ್ಟರಾಜು ಬೇಸರ

ಪ್ರತಿಭಾವಂತ ವಿಧ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣಕ್ಕೆ ನೆರವು

ಪಾಂಡವಪುರ : ಮಳೆಗಾಲದಲ್ಲಿ ತೊಣ್ಣೂರು ಕೆರೆಗೆ ಅಧಿಕ ನೀರು ಬಂದಾಗ ಕೆರೆ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಅಧಿಕಾರಿಗಳ ಜತೆಗೂಡಿ ಕೆಲಸ ನಾವು ಮಾಡಿದ್ದಕ್ಕೆ ಶಾಸಕರು ಕೆರೆ ಒಡೆಯಲು ಮುಂದಾಗಿದ್ದರು ಎಂದು ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದರು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಬೇಸರ ವ್ಯಕ್ತಪಡಿಸಿದರು. 
ಶನಿವಾರ ಪಾಂಡವಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಸಮಯವನ್ನೇ ಕಾಯುತಿರುತ್ತಾರೆ. ಈ ಭಾಗದ ರೈತರ ಬದುಕಿನ ಜೀವನಾಡಿಯಾದ ತೊಣ್ಣೂರು ಕೆರೆ ರಕ್ಷಣೆಗಾಗಿ ನಾವು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೇನೆ. 1996ರಲ್ಲಿ ನಾನು ಶಾಸಕನಾಗುವ ಮೊದಲೇ ಹೇಮಾವತಿ ನೀರು ಅಧಿಕ ಪ್ರಮಾಣದಲ್ಲಿ ಬಂದು ತೊಣ್ಣೂರು ಕೆರೆ ಅಪಾಯಕ್ಕೆ ಸಿಲುಕಿದಾಗ ಆಗಿನ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಇಲ್ಲಿಗೆ ಕರೆತಂದು ತೊಣ್ಣೂರು ಕೆರೆ ಕೋಡಿ ರೆಡಿ ಮಾಡಿಸಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತೊಣ್ಣೂರು ಕೆರೆಗೆ ಸಾಮಾನ್ಯ ಸಂಗ್ರಹ ಮಟ್ಟಕ್ಕಿಂತ ಅಧಿಕ ನೀರು ಬಂದು ಅಪಾಯದಂಚಿಗೆ ಸಿಲುಕಿದಾಗ ನೀರಾವರಿ ಅಧಿಕಾರಿಗಳು ವೀಕ್ಷಣೆ ಮಾಡಿ ನೀಡಿದ ಸೂಚನೆಯಂತೆ ಅಧಿಕಾರಿಗಳು ಕೆರೆಯ ಏರಿಯ ಮೇಲೆ ಟಾರ್ಪಲ್ ಹಾಕಿ ನೀರು ಹೊರಕ್ಕೆ ಹಾಕಲು  ಮುಂದಾಗಿದ್ದಾರೆ. ಆ ವೇಳೆ ಕೆರೆ ಏರಿ ಮೇಲಿದ್ದ ಗಿಡ ತೆರವು ಗೊಳಿಸಲು ಮುಂದಾದಾಗ ಅದೇ ಗ್ರಾಮದ ನಮ್ಮ ಜತೆಯಲ್ಲಿಯೇ ಇದ್ದು ನಮ್ಮಿಂದ ಅಧಿಕಾರ ಉಂಡು ಹೋದ ಮಹನೀಯನೊಬ್ಬರು ರಾಜಕೀಯ ದುರುದ್ದೇಶದಿಂದ ಕೆರೆ ಶಾಸಕರು ಕೆರೆ ಏರಿ ಕೊರೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸುಳ್ಳು ಹೇಳಿ, ಸಾಧ್ಯವಾದಷ್ಟು ಅಪ್ರಚಾರ ಮಾಡಿ ಗೊಂದಲ ಸೃಷ್ಠಿ ಮಾಡಿದರು. ರಾಮಾನುಜಾಚಾರ್ಯರು ದೇವರ ರೂಪದಲ್ಲಿ ಬಂದು ನಿರ್ಮಾಣದ ಮಾಡಿದ ಈ ಕೆರೆಯ ಏರಿ ಒಡೆಸಬೇಕು ಎನ್ನುವುದು ನನ್ನ ಕನಸ್ಸು ಮನಸ್ಸಿನಲ್ಲೂ ಬಂದಿಲ್ಲ. ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಅಪಪ್ರಚಾರ ಮಾಡಿದರು. ಇದರಿಂದ ನನಗೆ ಒಂದು ವಾರಗಳ ಕಾಲ ನಿದ್ರೆ ಬರಲಿಲ್ಲ. ಕೆರೆ ರಕ್ಷಣೆಗಾಗಿ ಕೆಲಸ ಮಾಡಿದಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಬೇಬಿ ಗ್ರಾಮದ ಸೌಂದರ್ಯ ಎಂಬ ಪ್ರತಿಭಾವಂತ ಯುವತಿ ನೀಟ್‍ನಲ್ಲಿ ಮೆಡಿಕಲ್ ಸೀಟು ಗಿಟ್ಟಿಸಿದ್ದು, ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಶಾಸಕ ಸಿ.ಎಸ್.ಪುಟ್ಟರಾಜು ಆಕೆಯ ಶೈಕ್ಷಣಿಕ ವೆಚ್ಚ ಭರಿಸುವ ಭರವಸೆ ನೀಡಿದರು.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು